ಶುದ್ಧ ನೀರಿನ ಘಟಕ ದುರಸ್ತಿಗೆ ಮನವಿ

ಕರ್ನಾಟಕ ನ್ಯೂಸ್24.ಕಾಂ/ ಜನ-ಜಂಜಾಟ
ರಾಯಚೂರು: ಕೇವಲ ಎರಡು ರೂ. ಒಂದು ಲೀಟರ್ ಕುಡಿಯುವ ನೀರು ಒದಗಿಸುತ್ತಿದ್ದ
ರಾಯಚೂರು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಅನೇಕ ತಿಂಗಳಿನಿಂದ ಹಾಳಾಗಿದೆ.
ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ನೀರಿ ಗಾಗಿ ಪರದಾಡಬೇಕಾಗಿದೆ. ದುಬಾರಿ ಬೆಲೆ ಕೊಟ್ಟು ಬಾಟಲಿ ನೀರು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಡ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ನೀರು ಒಸದಗಿಸುವ ಘಟಕದ ದುರಸ್ತಿ ಮಾಡಿಸಲು ಇಲಾಖೆಯ ಅಧಿಕಾರಿಗಳು ಮುಂದಾಗುತ್ತಿಲ್ಲ.
ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
– ಲಕ್ಷ್ಮಣ ಬೇವಿನ್, ಗೋನಾಳ