November 30, 2023

ಟೇಬಲ್ ಮೇಲೆ ರಾಷ್ಟ್ರಧ್ವಜ ರಾಯಚೂರು‌ ಶಾಸಕರ‌ ವಿರುದ್ಧ ಆಕ್ರೋಶ

ಕರ್ನಾಟಕನ್ಯೂಸ್24.ಕಾಂ
ರಾಯಚೂರು: ರಾಯಚೂರು ನಗರ ಕ್ಷೇತ್ರದ ಶಾಸಕರು ಚಿತ್ರೀಕರಿಸಿದ ವಿಡಿಯೋದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು‌ ಸಾರ್ವಜನಿಕರಿಂದ‌ ಆಕ್ರೋಶ ವ್ಯಕ್ತವಾಗಿದೆ.
ಹರ್ ಘರ್ ತಿರಂಗಾ ಕುರಿತು ಕ್ಷೇತ್ರದ ಜನತೆಗೆ ಮಾಹಿತಿ ನೀಡಲು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.‌ ಶಿವರಾಜ್ ಪಾಟೀಲ್ ವೀಡಿಯೋ  ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪಲೋಡ್ ಮಾಡಿದ್ದರು. ವಿಡಿಯೋದಲ್ಲಿ ರಾಷ್ಟ್ರ ಧ್ವಜವನ್ನು ಟೇಬಲ್ ಮೇಲೆ ಹಾಕಿ ಅದರ ಮೇಲೆ  ಕೈಇಟ್ಟು ಮಾತನಾಡಿರುವುದು‌ ಕಂಡು ಬಂದಿದೆ. ಇದೇ ಶಾಸಕರ ನ್ನು ಮುಜಗರಕ್ಕೀಡು ಮಾಡಿದೆ.
ಶಿಷ್ಟಾಚಾರ ಉಲ್ಲಂಘನೆ
ಇದು ರಾಷ್ಟ ಧ್ವಜ ಶಿಷ್ಟಾಚಾರ ಉಲ್ಲಂಘನೆ. ರಾಷ್ಟ್ರಧ್ವಜ ವನ್ನು ಟೇಬಲ್ ಕ್ಲಾಥ್‌ನಂತೆ ಬಳಸಿಕೊಳ್ಳಲಾಗಿದೆ. ಶಾಸಕರೇ ನೀವು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದೀರಿ ಎಂದು ಸಾರ್ವಜನಿಕರಿಂದ ಅಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರಿಂದ ಕ್ಲಾಸ್
ಶಾಸಕರು ವಿಡಿಯೋ ಹಾಗೂ ರಾಷ್ಟಧ್ವಜ ಶಿಷ್ಟಾಚಾರ ಉಲ್ಲಂಘನೆ ‌ಫೋಟೋಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದೆ. ಶಾಸಕರ‌ ನಡೆಯ ಬಗ್ಗೆ ನೆಟ್ಟಿಗರು ಶಾಸಕರಿಗೆ ಕ್ಲಾಸ್ ತೆಗೆದುಕೊಳ್ಳಲಾರಂಭಿಸಿದ್ದಾರೆ..
ಕಾಂಗ್ರೆಸ್ ಪ್ರತಿಭಟನೆ
ದೇಶದಲ್ಲಿ ರಾಷ್ಟ್ರ ಧ್ವಜಕ್ಕಿಂತ ದೊಡ್ಡ ಸ್ಥಾನ ಬೇರೆ  ಯಾವುದಕ್ಕೂ ನೀಡಿಲ್ಲ. ಆದರೆ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರು ರಾಷ್ಟ್ರ ಧ್ವಜವನ್ನು ಟೇಬಲ್ ಮೇಲೆ ಹಾಕಿ ರಾಷ್ಟ್ರಕ್ಕೆ ಅವಮಾನಿಸಿದ್ದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಘಟಕ ಫೋಸ್ಟ್ ಮಾಡಿದೆ.
ಕಾಂಗ್ರೆಸ್‌ ಯುವ ಘಟಕ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕ್ಷಮೆ ಯಾಚಿಸಿದ ಶಾಸಕ
ರಾಷ್ಟ್ರಧ್ವಜ ಅಪಮಾನದ‌ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಡಾ.‌ಶಿವರಾಜ ಪಾಟೀಲ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು,  ಕ್ಷಮಯಾಚನೆ ಮಾಡಿದ್ದಾರೆ.

Leave a Reply

Your email address will not be published.