ಶುಲ್ಕ ಪಾವತಿಸಿ 4 ತಿಂಗಳಾದರೂ ಸೇವೆ ಒದಗಿಸದ ಜೆಸ್ಕಾಂ

ಕರ್ನಾಟಕ ನ್ಯೂಸ್ 24.ಕಾಂ
ಕಲಬುರಗಿ: ಹೊಲದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿ, ಸಂಸ್ಥೆ ನಿಗದಿಪಡಿಸಿದ ಶುಲ್ಕ ಪಾವತಿಸಿ 4 ತಿಂಗಳು ಕಳೆದರೂ ಜೆಸ್ಕಾಂ (Gescom) ಸಿಬ್ಬಂದಿ ವಿದ್ಯುತ್ ಸಂಪರ್ಕ (electricity connection) ಕಲ್ಪಿಸದೆ ಗ್ರಾಹಕರನ್ನು ಅನಗತ್ಯವಾಗಿ ಅಲೆದಾಡುವಂತೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
READ|ಡಿಸೆಂಬರ್ 5 ರಿಂದ 22ರ ವರೆಗೆ ಅಗ್ನಿಪಥ್ ರ‌್ಯಾಲಿ, ನೀವು ನೋಂದಣಿ ಮಾಡಿಕೊಂಡಿದ್ದೀರಾ?
ಬೀದರ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಹೋಬಳಿ ವರವಟ್ಟಿ ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬ್ಯಾಲಹಳ್ಳಿ ಗ್ರಾಮದ ನಿವಾಸಿ ಇಂದುಮತಿ ಬಾಬುರಾವ್ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ/ಸಲ್ಲಿಸಿದ ಗ್ರಾಹಕರು. ಅವರ ತಮ್ಮ ಹೊಲದಲ್ಲಿ ಕೊಳವೆ ಬಾವಿ (Bore well) ಕೊರೆಯಿಸಿದ್ದಾರೆ. 4 ತಿಂಗಳ ಹಿಂದೆ (April 21,2022) ರಂದು ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ (GESCOM) ನಿಗದಿ ಮಾಡಿದ ಶುಲ್ಕ ಸಂದಾಯ ಮಾಡಿದ್ದಾರೆ. ಅದರೂ ಸಹ ಇವರ ಹೊಲಕ್ಕೆ ಇಲ್ಲಿವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ನಿಗದ ಅಧಿಕಾರಿಗಳ ಗಮನಕ್ಕೆ ತಂದರೂ ಗಮನಹರಿಸಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ವಿದ್ಯುತ್ ಬಿಲ್ ಪಾವತಿಗೆ ವಿಳಂಬವಾದರೆ ಸಂಪರ್ಕ ಕಡಿತಗೊಳಿಸುವ ಜೆಸ್ಕಾಂ ಸಿಬ್ಬಂದಿ ಗ್ರಾಹಕರಿಗೆ ಸೌಲಭ್ಯ ಗಳನ್ನು ಒದಗಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ.
“ಜೆಸ್ಕಾಂ ಅಧಿಕಾರಿಗಳು ರೈತರ ಬಗ್ಗೆ ಗಮನಹರಿಸಿ ಆದಷ್ಟು ಬೇಗನೆ ಇವರ ಹೊಲಕ್ಕೆ ಕಂಬ ಕೂಡಿಸು ವ್ಯವಸ್ಥೆ ಮಾಡಬೇಕು.”
–ವೈಜನಾಥ ಜಗದೇವ್
ಮಾಹಿತಿ ಹಕ್ಕು ಹೋರಾಟಗಾರ ಸಾಮಾಜಿಕ ಕಾರ್ಯಕರ್ತ, ಬೀದರ್