November 30, 2023

ಓಟು ಹಾಕದಿದ್ದರೆ ಕಲ್ಯಾಣ ಯೋಜನೆ ಕಟ್ ಎಂದ ಸಚಿವ: ಕುಟುಕಿದ ಚುನಾವಣಾ ಆಯೋಗ

ಕರ್ನಾಟಕ ನ್ಯೂಸ್24.ಕಾಂ
ತಮ್ಮ ಪಕ್ಷದ ಪರ ಮತ ಚಲಾಯಿಸದಿದ್ದರೆ ಸರಕಾರಿ ಸೌಲಭ್ಯ ಕಟ್ ಮಾಡುವುದಾಗಿ ಸಚಿವರೊಬ್ಬರು ಮತದಾರರಿಗೆ ಬೆದರಿಕೆ‌ ಹಾಕಿದ್ದು, ಸಚಿವನಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಈ ಘಟನೆ ‌ಜರುಗಿರುವುದು ಪಕ್ಕದ ರಾಜ್ಯ‌
ತೆಲಂಗಾಣ(Telangana)ದಲ್ಲಿ.
ಮುಂಬರುವ ಮುನುಗೋಡ್ ಉಪಚುನಾವಣೆಯಲ್ಲಿ ಟಿಆರ್‌ಎಸ್ (TRS) ಅಭ್ಯರ್ಥಿ ಪರವಾಗಿ ಮತ ಚಲಾಯಿಸದಿದ್ದರೆ ಕಲ್ಯಾಣ ಯೋಜನೆ ನಿಲ್ಲಿಸುವುದಾಗಿ ಮತದಾರರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಟಿಆರ್‌ಎಸ್ ಮುಖಂಡ ಮತ್ತು ತೆಲಂಗಾಣ ಇಂಧನ ಸಚಿವ (Energy minister) ಜಿ.ಜಗದೀಶ್ ರೆಡ್ಡಿಗೆ ಚುನಾವಣಾ ಆಯೋಗ (Election commission)
ನೋಟಿಸ್ ಜಾರಿ ಮಾಡಿದೆ. ಬಿಜೆಪಿ ಮುಖಂಡ ಕೆ.ದಿಲೀಪ್ ಕುಮಾರ್ ನೀಡಿದ ದೂರಿನ ಮೇರೆಗೆ ನೋಟಿಸ್ ಜಾರಿ ಮಾಡಲಾಗಿದೆ.

Leave a Reply

Your email address will not be published.