Peanut| ಟೈಂಪಾಸ್ ಕಡಲೆಕಾಯಿ ಸೇವೆಯಿಂದ ಏನೆಲ್ಲಾ ಟೆನ್ಷನ್? ಇಲ್ಲಿದೆ ಮಾಹಿತಿ

ಕಡಲೆಕಾಯಿ (Peanuts) ಬಡವರ ಬಾದಾಮಿ. ಎಲ್ಲ ರಿಗೂ ಕಡಲೆಕಾಯಿಯನ್ನು ಅಚ್ಚುಮೆಚ್ಚು. ಆದರೆ ಟೈಪಾಸ್(Time pass)ಗಾಗಿ ತಿನ್ನುವ ಕಡಲೆಕಾಯಿ ಇತ್ಯಾದಿ ಇಷ್ಟೆಲ್ಲಾ ತಾಪತ್ರೆ ತಂದೊಡ್ಡಿತೂ ಎಂದು ನೀವೂ ಯೋಚಿಸಿರಲ್ಲ. ಇಂದು ನಾವು ಕಡಲೆಕಾಯಿ ಸೇವನೆ ಎಷ್ಟು ಖತರ್ನಾಕ್ ಎಂಬುದನ್ನು ಅರಿಯೋಣ.
ಕಾರ್ಬೋಹೈಡ್ರೇಟ್, ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ನಿಂದ ಭರಿತ ಕಾಳು ಕಡಲೆಕಾಯಿ. ಇದರ ಸೇವನೆ ಜನರಿಗೆ ಹೊಸ ಉಲ್ಲಾಸ ನೀಡುತ್ತದೆ. ಅಲ್ಲದೇ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಕಡೆಲೆಕಾಯಿ ಸೇವನೆಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಅದೇ ಕಡಲೆಕಾಯಿ ಮನುಷ್ಯನಿಗೆ ಮಾರಕ ಎಂಬುದು ಗೊತ್ತಿಲ್ಲ.
ಕಡಲೆಕಾಯಿಯನ್ನು ತಿನ್ನುವುದರಿಂದ ಆಗುವ ಅನನುಕೂಲಗಳು ಮತ್ತು ಅದರ ಸೇವನೆಯನ್ನು ಯಾರು ತಪ್ಪಿಸಬೇಕು ಎಂಬುದನ್ನು ನಾವು ತಿಳಿಸಿಕೊಡಲಿದ್ದೇವೆ.
ಕಡಲೆಕಾಯಿ ಅಡ್ಡ ಪರಿಣಾಮಗಳಿವು;
• ಸೋಡಿಯಂ (sodium)ಪ್ರಮಾಣ ಹೆಚ್ಚಳ ಮಾರುಕಟ್ಟೆ ಯಲ್ಲಿ ಕಡಲೆಕಾಯಿಯ ರುಚಿಯನ್ನು ಹೆಚ್ಚಿ ಸಲು ಉಪ್ಪು ಮತ್ತು ಅನೇಕ ರೀತಿಯ ಮಸಾಲೆಗಳನ್ನು ಬಳಸಲಾಗುತ್ತದೆ. ನಂತರ ಅದನ್ನು ಸೇವಿಸಿದ ನಂತರ ದೇಹದಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಾಗುತ್ತದೆ.
ದೇಹದಲ್ಲಿ ಹೆಚ್ಚಿದ ಸೋಡಿಯಂ ರಕ್ತದೊತ್ತಡ (Blood pleaser)ಮತ್ತು ಹೃದಯ ಕಾಯಿಲೆ (Cordiology) ಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಅಧಿಕ ರಕ್ತ ದೊತ್ತಡ ಇರುವವರು ಕಡಲೆಯನ್ನು ಸೇವಿಸಬಾರದು.
• ಸ್ಥೂಲಕಾಯ(obesity)ಕ್ಕೆ ಕಾರಣ
ಕೆಲವರಿಗೆ ಕಡಲೆಕಾಯಿ ಎಂದರೆ ತುಂಬಾ ಇಷ್ಟ. ಅವರು ಅದನ್ನು ಪ್ರತಿದಿನ ಸೇವಿಸುತ್ತಾರೆ, ಕಡಲೆಕಾಯಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ.
ನಿತ್ಯ ಶೇಂಗಾ ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ನೀವು ಅಧಿಕ ತೂಕ ಹೊಂದಿದ್ದರೆ ಅಥವಾ ತೂಕ ಇಳಿಸಿ ಕೊಳ್ಳಲು ಪ್ರಯತ್ನಿಸುತ್ತಿ ದ್ದರೆ, ಹೆಚ್ಚು ಕಡಲೆಕಾಯಿ ಯನ್ನು ಸೇವಿಸುವುದನ್ನು ಈಗಲೇ ನಿಲ್ಲಿಸಿ.
• ಅಸಿಡಿಟಿ(Acidity)ಗೆ ದಾರಿ
ಅಸಿಡಿಟಿ ಸಮಸ್ಯೆ ಇರುವವರು ಶೇಂಗಾ ಸೇವನೆಯಿಂದ ದೂರವಿರಬೇಕು. ಕಡಲೆಕಾಯಿ ತಿನ್ನುವುದರಿಂದ ಮಲಬದ್ಧತೆ, ಗ್ಯಾಸ್, ಅಜೀರ್ಣ, ಅಸಿಡಿಟಿ ಇತ್ಯಾದಿ ಸಮಸ್ಯೆ ಹೆಚ್ಚುತ್ತದೆ.
ಆದ್ದರಿಂದ ಬಿಪಿ, ಬೊಜ್ಜು ಹಾಗೂ ಆಸಿಡಿಟಿ ಯಂತಹ ಸಮಸ್ಯೆ ಸೃಷ್ಟಿಸಬಲ್ಲ ಕಡಲೆಕಾಯಿ ಸೇವನೆ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.
ಸಮಸ್ಯೆ ಹೆಚ್ಚು ಗಂಭೀರವಾಗಿದ್ದರೂ ಸಹ ಕಡಲೆಕಾಯಿ ಯನ್ನು ಸೇವಿಸುವಾಗ ಎಚ್ಚರಿಕೆ ಇರಲಿ.