November 30, 2023

EPFO| ಪಿಂಚಣಿದಾರರು ಮನೆಬಾಗಿಲಿಗೆ ‘ಜೀವನ್ ಪ್ರಮಾಣ’ ಪ್ರಮಾಣಪತ್ರ ಸೇವೆ! ಹೇಗೆ ಇಲ್ಲಿದೆ ಸಿಂಪಲ್ ವಿಧಾನ.

jeevanpramaan certificate 2022
ಪಿಂಚಣಿದಾರರು ನವೆಂಬರ್ 1 ರಿಂದ ಜೀವನ್ ಪ್ರಮಾಣ (jeevanpramaan) ಪ್ರಮಾಣಪತ್ರವನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಪಿಂಚಣಿದಾರರು ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಪಿಂಚಣಿದಾರರು ಮನೆಯಿಂದಲೇ ಪೋಸ್ಟ್‌ಮ್ಯಾನ್ (Postman)ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು ಎಂದು ಅಂಚೆ ಇಲಾಖೆ (Postal Department) ತಿಳಿಸಿದೆ.
ಶುಲ್ಕ ಎಷ್ಟು?
ಪಿಂಚಣಿದಾರರು ತಮ್ಮ ಸರ್ವೈವಲ್ ಪ್ರಮಾಣಪತ್ರವನ್ನು ವೈಯಕ್ತಿಕವಾಗಿ ಸಲ್ಲಿಸಲು ತೀವ್ರ ಸಮಸ್ಯೆ ಎದುರಿಸುತ್ತಿ ದ್ದಾರೆ. ಈ ಸಂದರ್ಭದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಪಿಂಚಣಿದಾರರಿಗೆ ಬಯೋಮೆಟ್ರಿಕ್ (biometric) ವಿಧಾನದ ಮೂಲಕ ಡಿಜಿಟಲ್ ಸರ್ವೈವಲ್ ಸರ್ಟಿಫಿಕೇಟ್ (Digital Survival Certificate) ಅನ್ನು ಮನೆಯಿಂದಲೇ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪೋಸ್ಟ್ ಮ್ಯಾನ್ ಗೆ ರೂ.70 ಸೇವಾ ಶುಲ್ಕ ಪಾವತಿಸಬೇಕು.

ಲೈಫ್ ಸರ್ಟಿಫಿಕೇಟ್
ಪಿಂಚಣಿದಾರರು ತಮ್ಮ ಪ್ರದೇಶದ ಪೋಸ್ಟ್‌ಮ್ಯಾನ್‌ಗೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಪಿಪಿಒ ಸಂಖ್ಯೆ ಮತ್ತು ಪಿಂಚಣಿ ಖಾತೆಯ ವಿವರಗಳನ್ನು ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ನೋಂದಾಯಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ Survival Certificate ಪ್ರಮಾಣಪತ್ರವನ್ನು ಸಲ್ಲಿಸಬಹುದು . ಈ  ಸೇವೆಯನ್ನು ಪಡೆಯಲು ಬಯಸುವ ಪಿಂಚಣಿದಾರರು ಹತ್ತಿರದ ಪೋಸ್ಟ್ ಆಫೀಸ್ ಅಥವಾ ಅವರ ಏರಿಯಾ ಪೋಸ್ಟ್‌ಮ್ಯಾನ್ ಅನ್ನು ಸಂಪರ್ಕಿಸಬಹುದು.

ಅಲ್ಲದೆ, ವೆಬ್‌ಸೈಟ್ ವಿಳಾಸ: ಇಲ್ಲಿ ಕ್ಲಿಕ್ ಮಾಡಿ ಅಥವಾ ‘ಪೋಸ್ಟಿನ್ಫೋ‘ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಒಬ್ಬರು ಸೇವಾ ವಿನಂತಿಯನ್ನು ನೋಂದಾಯಿಸಿಕೊಳ್ಳಬಹುದು ಎಂದು ಅಂಚೆ ವಿಭಾಗದ ಅಧೀಕ್ಷಕರು ತಿಳಿಸಿದ್ದಾರೆ.
ಹೆಚ್ಚಿನ‌ ಮಾಹಿತಿಗೆ: https://jeevanpramaan.gov.in/  ಭೇಟಿ ನೀಡಿ

Leave a Reply

Your email address will not be published.