December 4, 2023

ನ.11 ರಿಂದ ಬಲದಂಡೆ‌ ಕಾಲುವೆಗೆ ನೀರು

ಕರ್ನಾಟಕ ನ್ಯೂಸ್24.ಕಾಂ
ನ.11, 2022 ರಿಂದ ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆ, ಕೊಳಚಿ ಬಲದಂಡೆ ಕಾಲುವೆ ಮತ್ತು ಏತ ನೀರಾವರಿ ಯೋಜನೆಗಳ ಮೂಲಕ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ.
ಮಲಪ್ರಭಾ ಯೋಜನಾ ವಲಯದಡಿಯಲ್ಲಿ ಬರುವ ರೇಣುಕಾ ಸಾಗರ ಜಲಾಶಯದಿಂದ ನೀರು ಹರಿಸಲಾಗು ತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತ ಬಾಂದವರು ಲಘು ನೀರಾವರಿ ಬೆಳೆಗಳನ್ನು ಮಾತ್ರ ತಮ್ಮ ಕ್ಷೇತ್ರದ ಶೇ.60 ರಷ್ಟು ಕ್ಷೇತ್ರಕ್ಕೆ ಬೆಳೆಯಲು ಹಾಗೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಕೋರಲಾಗಿದೆ.
ನೀರು ಹರಿಯುವ ಮುಖ್ಯ ಕಾಲುವೆ ದಡದಲ್ಲಿ ಈಜಲು, ದನ-ಕರುಗಳ ಮೈ ತೊಳೆಯಲು, ಇತ್ಯಾದಿಗಳಿಗೆ ಸಾರ್ವಜನಿಕರು ತೆರಳಿ ಅನಾಹುತಗಳು ಸಂಭವಿಸುತ್ತಿರು ವುದರಿಂದ, ಸಾರ್ವಜನಿಕರಿಗೆ ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಲಪ್ರಭಾ ಯೋಜನೆಯ ನಿಗಮದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಹಕಾರ ನೀಡಲು ಧಾರವಾಡ ಕರ್ನಾಟಕ ನೀರಾವರಿ ನಿಗಮ ಮಲಪ್ರಭಾ ಬಲದಂಡೆ ಕಾಲುವೆ ನಿಗಮ ವೃತ್ತದ ಸೂಪರಿಂಟೆಂಡಿಂಗ್ ಎಂಜಿನಿಯರ್  ತಿಳಿಸಿದ್ದಾರೆ.

Leave a Reply

Your email address will not be published.