December 4, 2023

Special trains| ಶಬರಿಮಲೆ‌ಗೆ ಸ್ಪೇಷಲ್‌ ಟ್ರೇನ್‌ಗಳ ಸಂಚಾರ; ಇಲ್ಲಿದೆ ವೇಳಾಪಟ್ಟಿ

ಕರ್ನಾಟಕ ನ್ಯೂಸ್24.ಕಾಂ
ಅಯ್ಯಪ್ಪ ಸ್ವಾಮಿ(Ayyappa Swamy)ಯ ದರ್ಶನಕ್ಕೆ ಶಬರಿಮಲೆ(Sabarimala)ಗೆ ತೆರಳುವ ಯಾತ್ರಾರ್ಥಿ ಗಳ ಅನುಕೂಲಕ್ಕಾಗಿ ಬೆಳಗಾವಿ (Belagavi) ಹಾಗೂ ಹುಬ್ಬಳ್ಳಿ (Hubli)ಯಿಂದ ಕೊಲ್ಲಂಗೆ ವಿಶೇಷ ರೈಲು ಗಳನ್ನು ಓಡಿಸಲು ನೈಋತ್ಯ ರೈಲ್ವೆ (South Western Railway) ನಿರ್ಧರಿಸಿದೆ.

READ|ರಾಯಚೂರು-ಬೆಳಗಾವಿ ನಡುವೆ ಎಕ್ಸ್‌ಪ್ರೆಸ್‌ ಕಾರಿಡಾರ್
ಸಾರ್ವಜನಿಕ/ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಳಗಾವಿ ಸಂಸದೆ ಮಂಗಳಾ ಸುರೇಶ್ ಅಂಗಡಿ (MP Managala suresh Angadi) ಅವರು ರೈಲ್ವೇ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಸಂಸದರ ಮನವಿ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ‌ವಲಯ ವಿಶೇಷ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಯಾವ ಯಾವ ರೈಲು
ರೈಲು ಸಂಖ್ಯೆ:07357/07358
ಎಲ್ಲಿಂದ- ಎಲ್ಲಿಗೆ: ಬೆಳಗಾವಿ – ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (Belgaum – Kollam – Belgaum Special Express)
ರೈಲು ಸಂಖ್ಯೆ 07357 ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 20 ರಂದು ಬೆಳಿಗ್ಗೆ 11.30 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ.
ಇದೆ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07358 ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 21 ರಂದು ಕೊಲ್ಲಂನಿಂದ ಸಂಜೆ 05.10 ಕ್ಕೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ರೈಲು ಸಂಚಾರ ಮಾರ್ಗ
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ  ಖಾನಾಪುರ, ಲೋಂಡಾ, ಧಾರವಾಡ, ಎಸ್‌.ಎಸ್‌.ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
20 ಬೋಗಿಗಳು
ಈ ವಿಶೇಷ ರೈಲು ಒಂದು 2ನೇ ಹವಾನಿಯಂತ್ರಿತ ದರ್ಜೆ, ಎಂಟು 3ನೇ  ಹವಾನಿಯಂತ್ರಿತ ದರ್ಜೆ,  ಒಂಬತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್‌ ಗಳೊಂದಿಗೆ ಜನರೇಟರ್ ಕಾರ ಒಳಗೊಂಡಿರುವ 20 ಬೋಗಿಗಳು ಹೊಂದಿರುತ್ತದೆ.

READ|ಗೋಲ್ಡ್ ಪ್ಯಾಲೇಸ್ ಗೆ ಭಾರೀ ದಂಡ ವಿಧಿಸಿದ ಗ್ರಾಹಕ ಆಯೋಗ
ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕೊಲ್ಲಂ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ (SSS Hubli – Kollam – SSS Hubli Special Express)
ರೈಲು ಸಂಖ್ಯೆ ;07359
ಎಲ್ಲಿಂದ ಎಲ್ಲಿಗೆ: ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 27 ರಂದು ಮಧ್ಯಾಹ್ನ 02.40 ಗಂಟೆಗೆ ಎಸ್‌.ಎಸ್‌.ಎಸ್ ಹುಬ್ಬಳ್ಳಿ ಯಿಂದ ಹೊರಟು ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ, ರೈಲು ಸಂಖ್ಯೆ 07360 ಕೊಲ್ಲಂ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು ನವೆಂಬರ್ 28 ರಂದು ಕೊಲ್ಲಂನಿಂದ ಸಾಯಂಕಾಲ 05:10 ಕ್ಕೆ ಹೊರಟು ಮರುದಿನ ರಾತ್ರಿ 8 ಗಂಟೆಗೆ ಎಸ್‌.ಎಸ್‌.ಎಸ್ ಹುಬ್ಬಳ್ಳಿ ತಲುಪಲಿದೆ.
ಸಂಚಾರ ಮಾರ್ಗ
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ  ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಬೆಳಗಾವಿ – ಕೊಲ್ಲಂ – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (7 ಟ್ರಿಪ್)
ಬೆಳಗಾವಿ – ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07361) ರೈಲು ಡಿಸೆಂಬರ್ 4 ರಿಂದ ಜನವರಿ 15 ರ ವರೆಗೆ ಬೆಳಗಾವಿಯಿಂದ ಪ್ರತಿ ಭಾನುವಾರ ಬೆಳಿಗ್ಗೆ 11.30 ಗಂಟೆಗೆ ಬೆಳಗಾವಿಯಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 03.15 ಕ್ಕೆ ಕೊಲ್ಲಂ ತಲುಪಲಿದೆ. ಇದೆ ಮಾರ್ಗದಲ್ಲಿ ಹಿಂದಿರುಗುವ ಕೊಲ್ಲಂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07362) ರೈಲು ಡಿಸೆಂಬರ್ 5 ರಿಂದ ಜನವರಿ 16 ರ ವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಂಜೆ 05:10 ಗಂಟೆಗೆ ಹೊರಟು ಮರುದಿನ ರಾತ್ರಿ 11 ಗಂಟೆಗೆ ಬೆಳಗಾವಿ ತಲುಪಲಿದೆ.
ಸಂಚಾರ ಮಾರ್ಗ
ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ  ಖಾನಾಪುರ, ಲೋಂಡಾ, ಧಾರವಾಡ, ಎಸ್‌.ಎಸ್‌.ಎಸ್ ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರು, ಪೊದನೂರು, ಪಾಲಕ್ಕಾಡ್, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ್, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಇದೆ.
15 ಬೋಗಿಗಳು
ಈ ವಿಶೇಷ ರೈಲುಗಳು (07359/07360 ಮತ್ತು 07361/07362) ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ  ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್‌ ಗಳಿಂದ ಕೂಡಿದ/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್ ಒಳಗೊಂಡಿರುವ 15 ಬೋಗಿಗಳು ಹೊಂದಿರುತ್ತದೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆಯ  ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.