VIMSನ ಫಿಸಿಯೋಥೆರಪಿ ವಿಭಾಗ ಟ್ರಾಮಾಕೇರ್ ಆಸ್ಪತ್ರೆಗೆ ಶಿಫ್ಟ್

ಕರ್ನಾಟಕ ನ್ಯೂಸ್24.ಕಾಂ
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (VIMS) ಆಸ್ಪತ್ರೆಯಲ್ಲಿನ ಫಿಸಿಯೋಥೆರಪಿ ಚಿಕಿತ್ಸೆ ವಿಭಾಗ (Department of Physiotherapy) ವನ್ನು ಟ್ರಾಮಾಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ವಿಮ್ಸ್ ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದ ಕಟ್ಟಡ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ರೋಗಿಗಳ ಚಿಕಿತ್ಸಾ ದೃಷ್ಟಿಯಿಂದ ಫಿಸಿಯೋಥೆರಪಿ ವಿಭಾಗವನ್ನು ಟ್ರಾಮಾ ಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಡಿಸೆಂಬರ್ 12ರಿಂದ ಸಾರ್ವಜನಿಕರು ಭೌತಿಕ ಚಿಕಿತ್ಸೆ ಯನ್ನು ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಪಡೆಯಬೇಕು ಎಂದು ವಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.