November 28, 2023

ಮನೆ ಕಳ್ಳತನ ಪ್ರಕರಣ: ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ

ಕರ್ನಾಟಕ ನ್ಯೂಸ್24.ಕಾಂ
ಧಾರವಾಡ: ನಗರದ ನಾನಾ ಕಡೆ 4 ಪ್ರಕರಣಗಳಲ್ಲಿ ಬಂಗಾರ ಹಾಗೂ ನಗದು ಕಳ್ಳತನಗಳಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಿ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶ ಚಂದ್ರಕಾಂತ ಡಿ. 3 ರಂದು ಶಿಕ್ಷೆ ಪ್ರಕಟಿಸಿದ್ದಾರೆ.

ಧಾರವಾಡದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯ ನವಲೂರಿನ ಎಲ್.ಎಮ್.ಸಿ ಚಾಳಿ, ನಂದಿನಿ ಲೇಔಟ್, ಬಾಲತ್ರಿಪುರಸುಂದರಿ ದೇವಸ್ಥಾನದ ಹತ್ತಿರ, ಶಿವಾಜಿ ನಗರ, ವಿನಾಯಕನಗರ ಬಡಾವಣೆಗಳಲ್ಲಿ ಪ್ರತ್ಯೇಕ ಕಳವು ಪ್ರಕರಣ ದಾಖಲಾಗಿದ್ದವು.

ಪ್ರಕರಣ ದಾಖಲಿಸಿಕೊಂಡ‌ ಪೊಲೀಸರು ತನಿಖೆ ನಡೆಸಿ ವೆಂಕಟೇಶರೆಡ್ಡಿ ಅಲಿಯಾಸ ಇಮ್ತಿಯಾಜ ಶೇಖ ತಂದೆ ನಾಗರಾಜನ್, ವನ್ನಾರ ಅಲಿಯಾಸ ಅಜಮೀರ ಶೇಖ ಹೊಸೂರ, ಶಾಂತಿನಗರ, ತಮಿಳುನಾಡು, (ಹಾಲಿವಾಸ: ಜನ್ನತನಗರ ಧಾರವಾಡ) ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಸಮಗ್ರ ತನಿಖೆ ಮಾಡಿದಾಗ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿಯ ಒಡವೆಗಳನ್ನು ಹಾಗೂ ನಗದು ಹಣ ವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿರುತ್ತದೆ.

ಅಲ್ಲದೇ ಸದರಿ ಆರೋಪಿ ತಾನು ಕಳ್ಳತನ ಮಾಡಿದ ಮಾಲನ್ನು ಶಬ್ಬೀರ ರೆಹಮಾನಸಾಬ ಶೇಖ, ಜನ್ನತನಗರ ಧಾರವಾಡ ಇತನಿಗೆ ಮಾರಾಟ ಮಾಡಲು ಕೊಡುತ್ತಿರುವ ಒಪ್ಪಿದ್ದಾನೆ ತಿಳಿದು ಬಂದಿರುತ್ತದೆ.

ಪೊಲೀಸರು ಸದರಿ ಇಬ್ಬರು ಆರೋಪಿತರಿಂದ ಕಳ್ಳತನ ವಾದ ಒಡವೆಗಳನ್ನು ಜಪ್ತಿ ಮಾಡಿದ್ದು, ಮೇಲ್ಕಾಣಿಸಿದ ಪ್ರಕರಣಗಳ ಪಿರ್ಯಾದಿದಾರರು ಅವುಗಳನ್ನು ಗುರುತಿಸಿರುತ್ತಾರೆ.

ಧಾರವಾಡ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಮಹೇಶಚಂದ್ರಕಾಂತ ಇವರು ಪ್ರಕರಣಗಳಲ್ಲಿ 1ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 454 ರಡಿ ಅಪರಾಧಕ್ಕಾಗಿ 4 ಪ್ರಕರಣ ಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿದೆ.

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ. ಅದೇ ರೀತಿ, ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧ ಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ.

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ 2 ನೇ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 411 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ. ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 2 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಉಳಿದ ಇನ್ನೊಂದು ಪ್ರಕರಣ 1ನೇ ಆರೋಪಿಗೆ  4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ  ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಅದೇರೀತಿ ಭಾರತೀಯ ದಂಡ ಸಂಹಿತೆ ಕಲಂ 380 ರಡಿ ಅಪರಾಧಕ್ಕಾಗಿ ಈ ಮೇಲ್ಕಾಣಿಸಿದ 4 ಪ್ರಕರಣಗಳಲ್ಲಿ ತಲಾ 3 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿದೆ ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸದರಿ ಪ್ರಕರಣಗಳಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಪೊಲೀಸರು ಆರೋಪಿತರ ವಿರುದ್ಧ ಮುಂದಿನ ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯ ಸರ್ಕಾರಿ ವಕೀಲ (ಅಭಿಯೋಜಕರು) ರಾದ   ಅನಿಲಕುಮಾರ ಆರ್ ತೊರವಿ ಇವರು ವಕಾಲತ್ತು ಮಂಡಿಸಿದ್ದರು.

ಹುಲಗಿ ದೇವಸ್ಥಾನದಲ್ಲಿ ಈ ಅಚರಣೆಗಳು‌ ಕುಮ್ಮಕ್ಕು ನೀಡಿದರೂ ಕಂಬಿ ಎಣಿಸುವುದು ಗ್ಯಾರೆಂಟಿ!

Leave a Reply

Your email address will not be published.