ಬಸ್ ಡಿಕ್ಕಿ ಕೂಲಿಕಾರರ ದುರ್ಮರಣ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಮೋಟಾರ್ ಬೈಕ್ ಗೆ ಸಾರಿಗೆ ಸಂಸ್ಥೆ ಬಸ್ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಬೈಕ್ ಮೇಲೆ ಸಂಚರಿಸುತ್ತಿದ್ದ 3 ಜನ ಕೂಲಿಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಸ್ಕಿ ತಾಲೂಕು ಗುಡದೂರು ಗ್ರಾಮದ ಕೆನಾಲ್ ಬಳಿ ಅಪಘಾತ ಜರುಗಿದೆ. ಮೃತರನ್ನು ಆಂಧ್ರ ಮೂಲದವರು ಎಂದು ಹೇಳಲಾಗುತ್ತಿದೆ.
ಆಂಧ್ರದ ನಂದ್ಯಾಲ ಗ್ರಾಮದ ಶ್ರೀನಿವಾಸ್(26), ಜೈಪಾಲ(19), ನಾಗರಾಜ್(30) ಎಂದು ಗುರುತಿಸಲಾಗಿದೆ.
ಭತ್ತ ಕಟಾವು ಕಾರ್ಯಕ್ಕಾಗಿ ಕಟಾವು ಯಂತ್ರದೊಂದಿಗೆ ಇವರು ಆಗಮಿಸಿದ್ದತು. ಊಟ ಮಾಡಲು ಮಾದಕಿ ಪಟ್ಟಣಕ್ಕೆ ಬಂದು ಮರುಳುವ ವೇಳೆ ಈ ಅವಘಡ ಸಂಭವಿಸಿದೆ.
ಬೈಕ್ ಮೇಲೆ ತೆರಳುತ್ತಿದ್ದ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸ ಲಾಗಿದೆ.
ಮಸ್ಕಿ ಠಾಣೆ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.