November 28, 2023

ಡಿ.18 ರಂದು ಉದ್ಯೋಗ ಮೇಳ, ಈಗಲೇ ನೋಂದಣಿ ಮಾಡಿಸಿ

ಕರ್ನಾಟಕ ನ್ಯೂಸ್24.ಕಾಂ|JOB JUNCTION
ಧಾರವಾಡ: ನಗರದ ವಿದ್ಯಾಗಿರಿ JSS ಆವರಣದಲ್ಲಿ ಡಿ.18 ರಂದು ಬೆಳಿಗ್ಗೆ 9ಕ್ಕೆ ಉದ್ಯೋಗ ಮೇಳ JOB Fair ಆಯೋಜಿಸಲಾಗಿದೆ.

READ|ಒಂದೇ ಮೊಬೈಲ್ ನಲ್ಲಿ 2ಕ್ಕಿಂತ ಹೆಚ್ಚು ವಾಟ್ಸಪ್ ಖಾತೆ ನಿರ್ವಹಣೆ ಹೇಗೆ?
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಶನ್, ಕಾಲೇಜು ಶಿಕ್ಷಣ ಇಲಾಖೆ,  ಉದ್ಯೋಗ ಮತ್ತು ತರಬೇತಿ ಇಲಾಖೆ, ಜನತಾ ಶಿಕ್ಷಣ ಸಮಿತಿ, ರ್ಯಾಪೀಡ್ ಸಂಸ್ಥೆ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಗಳ ಸಹಯೋಗದಲ್ಲಿ ಮೇಳ ಜರುಗಲಿದೆ.
ಈ ಅರ್ಹತೆಗಳು ಅಗತ್ಯ
ಎಸ್.ಎಲ್.ಸಿ ಅನುತ್ತೀರ್ಣ ಮತ್ತು ಅದಕ್ಕಿಂತಲೂ ಕಡಿಮೆ ಶಿಕ್ಷಣ ಪಡೆದವರು ಹಾಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐಟಿಐ, ಡಿಪ್ಲೋಮಾ, ಬಿಇ, ಬಿಎ, ಬಿ.ಕಾಂ ಇನ್ನಿತರೆ ಪದವಿ ಮತ್ತು ಸ್ನಾತಕೋತರ ಪದವಿ ಪಾಸಾದ ಅಭ್ಯರ್ಥಿಗಳು ಭಾಗವಹಿಸಬಹುದು.
ಉದ್ಯೋಗ ಮೇಳದಲ್ಲಿ ಒಟ್ಟು 70 ಕಿಂತ ಅಧಿಕ ಉದ್ಯೋಗದಾತರು ಭಾಗವಹಿಸುತ್ತಾರೆ. ಅಭ್ಯರ್ಥಿಗಳು http://skillconnect.kaushalkar.com/candidatereg Google link  ನಲ್ಲಿ ನೋಂದಾಯಿಸಿ ಮತ್ತು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಕಂಪನಿಗಳು (ಉದ್ಯೋಗದಾತರು) ಈ https://skillconnect.kaushalkar.com/employereg  Google link ನಲ್ಲಿ ನೋಂದಾಯಿಸಿ ಕೊಂಡು ಉದ್ಯೋಗ ಮೇಳದ ಸದುಪಯೋಗ ಪಡೆದು ಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.