November 28, 2023

ಉಚಿತ ಪರೀಕ್ಷಾ ಪೂರ್ವ ತರಬೇತಿ: ಈಗಲೇ ರಿಜಿಸ್ಟರ್ ಮಾಡಿಸಿ

ಕರ್ನಾಟಕ ನ್ಯೂಸ್24.ಕಾಂ
ಬಳ್ಳಾರಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ (District Employment exchange office) ಮತ್ತು ಪೋಲೀಸ್ ಇಲಾಖೆ(Police Department) ಯ ಸಂಯುಕ್ತಾಶ್ರಯ ದಲ್ಲಿ ಪೋಲೀಸ್ ಕಾನ್‍ಸ್ಟೇಬಲ್ (Police constable) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಉಚಿತ ಪರೀಕ್ಷಾ ಪೂರ್ವ ತರಬೇತಿ (free couching) ಆಯೋಜಿಸಲಾಗಿದೆ.
ನಗರದ ಡಿಎಆರ್(DAR) ಪೊಲೀಸ್ ಮೈದಾನದಲ್ಲಿ ರುವ ಬೋಧನಾ ಕೊಠಡಿಯಲ್ಲಿ ಡಿಸೆಂಬರ್ 15 ರಿಂದ 24 ರವರೆಗೆ ತರಬೇತಿ ನೀಡಲಾಗುತ್ತದೆ.
ಉಚಿತ ನೋಂದಣಿ
ಪೋಲೀಸ್ ಕಾನ್‍ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ರುವ ಅಭ್ಯರ್ಥಿಗಳು ಉಚಿತ ತರಬೇತಿಗೆ ನೊಂದಾಯಿ ಸಿಕೊಳ್ಳಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.901969 2898, 7892971984 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published.