November 29, 2023

ಭಾರತ-ಬಾಂಗ್ಲಾ ಟೆಸ್ಟ್ ಪಂದ್ಯ, ಹಿಡಿತ ಸಾಧಿಸಿದ‌ ಭಾರತೀಯ ಬೌಲಿಂಗ್ ಪಡೆ

ಕರ್ನಾಟಕ ನ್ಯೂಸ್24.ಕಾಂ
ಭಾರತ ಮತ್ತು ಬಾಂಗ್ಲಾ (India and Bangladesh) ನಡುವೆ ಚಿತೋಗ್ರಾಮ್ ‌(Chitogram)ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ (Test cricket match)ದ ಮೂರನೇ ದಿನದಾಟ ಇಂದು ಮುಂದುವರಿಯಲಿದೆ. ಸದ್ಯ ಭಾರತ ತಂಡ (Indian team)ಮೇಲುಗೈ ಸಾಧಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ಕಳೆದುಕೊಂಡು 133 ರನ್ ಮಾಡಿದೆ. ಬಾಂಗ್ಲಾದೇಶದ ಪರ ಮುಶ್ಫಿಕರ್ ರಹೀಂ ಅತಿ ಹೆಚ್ಚು 28 ರನ್ ಗಳಿಸಿದರು.
ಭಾರತದ ಪರ ಕುಲದೀಪ್ ಯಾದವ್ (Kuldeep Yadav) 4 ಮತ್ತು ಮೊಹಮ್ಮದ್ ಸಿರಾಜ್ (Mohammad Siraj) 3 ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮುನ್ನ 6 ವಿಕೆಟ್ ಕಳೆದುಕೊಂಡು 278 ರನ್‌ಗಳಿಸಿದ್ದ ಭಾರತ 404 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಚೇತೇಶ್ವರ ಪೂಜಾರ (Cheteshwar Pujara’s) 90 ಮತ್ತು ಶ್ರೇಯಸ್ ಅಯ್ಯರ್ 86 ರನ್‌ಗಳಿಸಿ, ಕೆಲವೇ ಕೆಲವು ರನ್‌ಗಳ ಅಂತರದಿಂದ ಶತಕ ವಂಚಿತರಾದರು.

Leave a Reply

Your email address will not be published.