Exiled| ಜಿಲ್ಲೆಯಿಂದ 6 ಜನ ಆರೋಪಿಗಳ ಗಡಿಪಾರು

ಕರ್ನಾಟಕ ನ್ಯೂಸ್24.ಕಾಂ
ಜೂಜಾಟ(Gambling)ದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹದಗೆಡಲು ಕಾರಣವಾಗಿದ್ದ 6 ಜನರನ್ನು 6 ತಿಂಗಳ ಅವಧಿಗೆ ಗಡಿಪಾರು ಮಾಡಲಾಗಿದೆ
ಜಿಲ್ಲಾ ಪೊಲೀಸ್ ಅಧೀಕ್ಷಕರ ಮನವಿ ಆಧರಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಡಿಪಾರು ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮಟಕಾ ಜೂಜಾಟದಲ್ಲಿ ನಿರತವಾಗಿದ್ದ ರಾಯಚೂರು ನಗರದ ಅಂದ್ರೂನ್ ಖಿಲ್ಲಾ ನಿವಾಸಿ ಮಹ್ಮದ್ ಹಾಜಿ @ ಹಾಜಿ ತಂದ ಲಿಯಾಖತ್ (38), (ಸದರ ಬವಾರ ಪೊಲೀಸ್ ಠಾಣೆ), ಸರ್ದಾರ ಬಾಬು@ ವೆಂಕಟೇಶ ಸರ್ದಾರ ತಂದೆ ಬಸಣ್ಣ(55) ಧನಗಾರವಾಡಿ ಏರಿಯಾ, ಸಿಂಧನೂರು (ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿ), ಬುರಾ ಸಾಬ್ @ ಲಾಲೇ ಸಾಬ್ @ ಬುದನ್‌ಸಾಬ್ ತಂದೆ ಮೌಲನಾಬ್(45), ಬಾಗಲವಾಡ ತಾ. ಸಿರವಾರ (ಕವಿತಾಳ ಪೊಲೀಸ್ ಠಾಣೆಯ ವ್ಯಾಪ್ತಿ), ರಾಘವೇಂದ್ರ ತಂದ ಪಾಂಡವ್ಯ(42) ಬಳಗಾನೂರು ( ಬಳಗಾನೂರು ಪೊಲೀಸ್ ಠಾಣೆ), ಲಾಲು @ ಮುಸ್ತಫಾ ತಂದೆ ಅಬ್ಬುಲ್ ಹುಸೇನ್ (37) ಹಳೆ ಮುಸ್ಲಿಂ ನಾನ ದೇವರು ಮಸೀದಿ ಹತ್ತಿರ ಕೋನಾಪೂರ, ಮಾನವಿ (ಮಾನವಿ ಪೊಲೀಸ್ ಠಾಣೆ), ನರಸಪ್ಪ ತಂದೆ ಅಮರಪ್ಪ (56) ಗೊರಬಾಳ್, (ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ) ಇವರುಗಳಿಗೆ ಗಡಿಪಾರು ಮಾಡಲು ಸಂಬಂಧಪಟ್ಟ ಠಾಣೆಗಳ ಪಿ.ಎಸ್.ಐ/ಪಿ.ಐ ರವರಿಗೆ ಆದೇಶಿಸಲಾಗಿದೆ.
ಶಿಕ್ಷೆಗೆ ಒಳಗಾದ ವ್ಯಕ್ತಿಗಳ ಬಗ್ಗೆ ನಿಗಾವಹಿಸಿ ಅವರುಗಳು ಗಡಿಪಾರು ಆದೇಶವನ್ನು ಉಲ್ಲಂಘಿಸಿ ಮರಳಿ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರವೇಶಿಸಿದಲ್ಲಿ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.
READ| ಕಳ್ಳನ ಬಂಧನ; 8 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ
ಸಾಮಾಜಿಕ ಪಿಡುಗಾದ ಮಟಕಾ ಜೂಜಾಟ ಹಾಗೂ ಇಸ್ಪೀಟ್ ಜೂಜಾಟಗಳ ವಿರುದ್ಧ ರಾಯಚೂರು ಜಿಲ್ಲಾ ಪೊಲೀಸ್ ನಿರಂತರ ಕಠಿಣ ಕ್ರಮ ಕೈಗೊಳ್ಳುತ್ತಿದ್ದು ಯಾವುದೇ ರೀತಿಯ ಕಾನೂನು ಬಾಹಿರ ಜೂಜಾಟ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಎಸ್ಪಿ ಬಿ.ನಿಖಿಲ್ ಮನವಿ ಮಾಡಿದ್ದಾರೆ.