ಪಿಎಸ್ಐ ಗೀತಾಂಜಲಿ ಶಿಂಧೆ ಅಮಾನತು: ಕಾರಣಗಳೇನು? ಇಲ್ಲಿದೆ ಡಿಟೇಲ್ಸ್

ಕರ್ನಾಟಕ ನ್ಯೂಸ್24.ಕಾಂ
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ರವಾರ ಪೊಲೀಸ್ ಠಾಣೆ (sirwar)ಲೇಡಿ ಪಿಎಸ್ಐ (PSI) ಗೀತಾಂಜಲಿ ಶಿಂಧೆ ಅವರನ್ನು ಅಮಾನತು ಮಾಡಲಾಗಿದೆ.
ಸಾಲು ಸಾಲು ಕಿರುಕುಳ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ನಿಖಿಲ್ ಬಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಆರೋಪಗಳೇನು?
ಇತ್ತೀಚೆಗೆ ಯಾವುದೇ ಯುವಕನೊಬ್ಬ ಪಿಎಸ್ಐ ವಿರುದ್ಧ ಕಿರುಕುಳ ಆರೋಪ ಮಾಡಿದ್ದ. ಆತ್ಮಹತ್ಯೆ ಪತ್ರ (Death Note) ಬರೆದಿಟ್ಟು ನಾಪತ್ತೆಯಾಗಿದ್ದ. ಜಮೀನು ವಿವಾದಕ್ಕೆ ಸಂಬಂಧ ಯುವಕನಿಗೆ 3 ತಿಂಗಳಿಂದ ಕಿರು ಕುಳ ಆರೋಪ ಮಾಡಲಾಗಿತ್ತು. ಅಲ್ಲದೆ ಸಿರವಾರ ಠಾಣೆಯಲ್ಲೇ ಪಿಎಸ್ಐ ವಿರುದ್ದ ಪ್ರಕರಣ ದಾಖಲಾಗಿತ್ತು.
ಇದಕ್ಕಿಂತ ಮುಂಚೆ ರೈತನೊಂದಿಗೆ ಕಿರಿಕ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ವಶಪಡಿಸಿಕೊಂಡ ವಸ್ತುಗಳನ್ನು ಮರಳಿಸಿಲ್ಲ ಎಂಬ ಆರೋಪ ಕೂಡಾ ಕೇಳಿ ಬಂದಿತ್ತು.
ಪಿಎಸ್ಐ ಗೀತಾಂಜಲಿ ಶಿಂಧೆ ಸಾರ್ವಜನಿಕವಾಗಿ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಕೆಲವರು ನೇರವಾಗಿ ಎಸ್ಪಿ ಅವರಿಗೆ ದೂರು ಸಲ್ಲಿಸಿದ್ದರು.
ಎಲ್ಲ ಆರೋಪ ಹಾಗೂ ದೂರಗಳ ಹಿನ್ನೆಲೆಯಲ್ಲಿ ಗೀತಾಂಜಲಿ ಅವರನ್ನು ಅಮಾನತುಗೊಳಿಸಲಾಗಿದೆ.