December 1, 2023

Pusa JG 16| ಬರಡು ನೆಲದಲ್ಲೂ ಬಂಪರ್ ಇಳುವರಿ: ಕಡಿಮೆ ನೀರಿನಲ್ಲಿ ಬೆಳೆಯಬಹುದು ಈ ಕಡಲೆ ತಳಿ

ಕರ್ನಾಟಕ ನ್ಯೂಸ್24.ಕಾಂ|Agri Update
ಅರೋಗ್ಯ‌ ಹಾಗೂ ಪ್ರೋಟೀನ್ ದೃಷ್ಟಿಯಿಂದಲೂ ಕಡಲೆ ಶ್ರೀಮಂತ ಧಾನ್ಯ. ಭಾರತದಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆ ಕಡಲೆ. ಅಲ್ಲದೇ ಪ್ರಪಂಚದಲ್ಲಿ ಅತೀ ಹೆಚ್ಚು ಕಡಲೆ ಉತ್ಪಾದನೆ ಮಾಡುವುದು ಕೂಡಾ ಭಾರತದಲ್ಲೇ.

READ|ಕಡಲೆ ಬಿತ್ತನೆಗೆ ಪ್ಲಾನ್ ಮಾಡಿದ್ದಿರಾ? ಇಲ್ಲಿದೆ ಕೃಷಿ ತಜ್ಞರ ಸಲಹೆ
ಸರ್ಕಾರ ಕೂಡ ಭಾರತವನ್ನು ದ್ವಿದಳ ಧಾನ್ಯಗಳ ಬೆಳೆ ಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಸರ್ಕಾರದೊಂದಿಗೆ ಕೃಷಿ ವಿಜ್ಞಾನಿಗಳು ಸಹ ರೈತರ ಕೆಲಸವನ್ನು ಸುಲಭಗೊಳಿಸಲು ಹೊಸ ತಂತ್ರಗಳು ಮತ್ತು ತಳಿಗಳನ್ನು ಆವಿಷ್ಕರಿಸುತ್ತಿದ್ದಾರೆ.
‌ಈ ಹಾದಿಯಲ್ಲಿ ವಿಜ್ಞಾನಿಗಳು ಹೊಸ ಕಡಲೆ ತಳಿಯನ್ನು ಸಂಶೋಧನೆ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ.
ಹೊಸದಾಗಿ ಅಭಿವೃದ್ಧಿ ಪಡಿಸಿರುವ ಕಡಲೆ ತಳಿಗೆ ‘Pusa JG 16” ಅನ್ನು ಎಂದು ಹೆಸರಿಡಲಾಗಿದೆ. ಏನಿದರ ವಿಶೇಷ? ಉಳಿದ ತಳಿಗಳಿಗಿಂತ ಹೇಗೆ ಭಿನ್ನ ಇಲ್ಲಿದೆ ಡಿಟೇಲ್ಸ್.

ICAR-ARI ಕಡಲೆ ಹೊಸ ತಳಿಯನ್ನು ಅಭಿವೃದ್ಧಿಪಡಿ ಸಿದೆ. ಇದು ಕಡಿಮೆ ನೀರು ಮತ್ತು ಬರಪೀಡಿತ ಪ್ರದೇಶಗಳಲ್ಲಿ ಬಂಪರ್ ಇಳುವರಿಯನ್ನು ನೀಡುತ್ತದೆ. ಮಳೆ ಕೊರತೆ ಕಂಡು ಬರುವ ರಾಜ್ಯಗಳಿಗೆ ಇದು‌ ಅತ್ಯಂತ ಸಹಕಾರಿ ಎನ್ನುವುದು ಕೃಷಿ ವಿಜ್ಞಾನಿಗಳ ಅಂಬೋಣ.
ಯಾವ ರಾಜ್ಯಗಳಿಗೆ ಸಹಕಾರಿ
ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಛತ್ತೀಸ್‌ಗಢ , ದಕ್ಷಿಣ ರಾಜಸ್ಥಾನ , ಮಧ್ಯಪ್ರದೇಶ , ಗುಜರಾತ್ ಮತ್ತು ಮಹಾರಾಷ್ಟ್ರದ ಕಡಿಮೆ ನೀರಿನ ಪ್ರದೇಶಗಳಲ್ಲಿ ಈ ವಿಧವನ್ನು ಸುಲಭವಾಗಿ ಬೆಳೆಯಬಹುದು.
ಇಳುವರಿ ಎಷ್ಟು?
ಈ ಹೊಸ ತಳಿಯೊಂದಿಗೆ ಬರ ಪೀಡಿತ ಪ್ರದೇಶದಿಂದ ರೈತರು ಪ್ರತಿ ಹೆಕ್ಟೇರ್‌ಗೆ 1.3 ಟನ್‌ನಿಂದ 2 ಟನ್ ಇಳುವರಿ ಪಡೆಯಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಜೀನೋಮಿಕ್ ಅಸಿಸ್ಟೆಡ್ ತಂತ್ರ ಅನ್ವಯ
ICC 4958  ವೈವಿಧ್ಯಕ್ಕೆ ಜೀನೋಮಿಕ್ ಅಸಿಸ್ಟೆಡ್ ಬ್ರೀಡಿಂಗ್ ತಂತ್ರಗಳನ್ನು ಬಳಸಿಕೊಂಡು ಕೃಷಿ ವಿಜ್ಞಾನಿ ಗಳು JG16 ನಲ್ಲಿ  ಈ ಹೊಸ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ‌ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಬರಗಾಲದಲ್ಲೂ ಬಂಪರ್ ಉತ್ಪಾದನೆ
ಪೂಸಾ ಜೆಜಿ 16 ತಳಿಯ ಕಡಲೆ ಮುಖ್ಯವಾಗಿ ಬರಪೀಡಿತ ಪ್ರದೇಶಗಳಿಗೆ ಹೆಚ್ಚು ಸಹಕಾರಿ. ಇದು ಕಡಿಮೆ ನೀರಿನಲ್ಲಿಯೂ ಉತ್ತಮ ಇಳುವರಿ ನೀಡುತ್ತದೆ. ಅಂಕಿಅಂಶಗಳನ್ನು ನೋಡಿದರೆ ಕಡಿಮೆ ನೀರಾವರಿ ಮತ್ತು ಬರದಿಂದ ಶೇ.50ರಿಂದ 100ರಷ್ಟು ಹುರುಳಿ ಬೆಳೆ ನಷ್ಟವಾಗಿದೆ. ಆದರೆ ಈಗ ರೈತರ ಈ ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ಕಂಡು ಹಿಡಿಯಲಾಗಿದೆ.
ಪೂಸಾ ಜೆಜಿ 16 ಅನ್ನು ಬೆಳೆಸುವ ಮೂಲಕ, ರೈತರು ಕಷ್ಟಕರ ವಾತಾವರಣದಲ್ಲಿಯೂ ಬಂಪರ್ ಉತ್ಪಾದನೆ ಯನ್ನು ಪಡೆಯಬಹುದು.

Leave a Reply

Your email address will not be published.