IPL|ರಾಯಲ್ ಚಾಲೆಂಜರ್ಸ್ ತಂಡಕ್ಕೆ ರಾಯಚೂರಿನ ಕ್ರಿಕೆಟ್ ಪ್ರತಿಭೆ

ಕರ್ನಾಟಕ ನ್ಯೂಸ್24.ಕಾಂ|Sports
IPL 2023ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಚೂರಿನ ಯುವ ಪ್ರತಿಭೆ ಮನೋಜ್ ಬಾಂಡಗೆ ಅವರನ್ನು 20 ಲಕ್ಷ ರೂ.ಗೆ ಖರೀದಿಸಿದೆ.
READ| ಕೋಚ್ ಬಿಹಾರ್ ಟ್ರೋಫಿಯಲ್ಲಿ ಮಿಂಚಿದ ಕಲಬುರಗಿ ಶಶಿ
ಈ ಮೂಲಕ RCB ತಂಡದಲ್ಲಿ ಕನ್ನಡಿಗರಿಲ್ಲ ಎನ್ನುವ ಕೊರಗನ್ನು ರಾಯಚೂರಿನ ಮನೋಜ್ ದೂರ ಮಾಡಿದ್ದಾರೆ.
ಮನೋಜ್ ಬಾಂಡಗೆ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಆಲ್ ರೌಂಡರ್ ಆಟಗಾರನಾದ ಮನೋಜ್ ಆಯ್ಕೆ ತವರು ಜಿಲ್ಲೆಯ ಕ್ರಿಕೆಟ್ ಪ್ರೇಮಿಗಳಿಗೆ ಸಂಭ್ರಮದಲ್ಲಿ ತೇಲುವಂತೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಯ್ಕೆ ಸುದ್ದಿ ವೈರಲ್ ಆಗಿದೆ. ಗಣ್ಯರು ಹಾಗೂ ಕ್ರೀಡಾ ಪ್ರೇಮಿಗಳು ಶುಭ ಕೋರುತ್ತಿದ್ದಾರೆ.
ಸಿಂಧನೂರಿನಲ್ಲಿ ಸಂಭ್ರಮ
ಮನೋಜ್ ಬಾಂಡಗೆ ಆರ್‌ಸಿಬಿ ತಂಡಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳು, ಹಿತೈಷಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಬೈಕ್ ರ‍್ಯಾಲಿ ನಡೆಸಿದರು. ಮತ್ತೊಂದೆಡೆ ಗಾಂಧಿ ವೃತ್ತದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿ ಖುಷಿ ಆಚರಿಸಿದ್ದಾರೆ.
ಮನೋಜ್ ಸಾಗಿಬಂದ ಹಾದಿ
2018-19 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ ತಮ್ಮ ಟ್ವೆಂಟಿ 20 ಚೊಚ್ಚಲ ಪಂದ್ಯ ವಾಡಿದ್ದಾನೆೆೆೆ. ಏಕದಿನದ ಹಿರಿಯರ ತಂಡದಲ್ಲಿ ಸಹ ಗಮನ ಸೆಳೆದಿದ್ದಾರೆ. ಮಹಾರಾಜ ಟ್ರೋಫಿ ಗುಲ್ಬರ್ಗ ವಿಭಾಗದಿಂದ ಆಡಿ ಗೆಲುವಿ ರೂವಾರಿಯಾಗಿದ್ದಾನೆ.
ಕುಟುಂಬಸ್ಥರ ಸಂಭ್ರಮ
ಆಲ್‌ರೌಂಡರ್ ಆಗಿ ಆಟವಾಡುತ್ತಿರುವ ಮನೋಜನ ಸಾಧನೆ ಇಡೀ ಕುಟುಂಬಕ್ಕೆ ಸಂತಸ ತಂದಿದೆ. ಕ್ರಿಕೆಟ್ ರಂಗದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.
2023 ಆರ್ ಸಿಬಿ ತಂಡ: ಫಾಫ್ ಡು ಪ್ಲೆಸಿಸ್ (ನಾಯಕ) ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ವಿಲ್ ಜಾಕ್ಸ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್.