ಬಡೇಸಾಬ ಉರುಸ್ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು ತಾಲೂಕಿನ ಮಾಲದೊಡ್ಡಿ ಗ್ರಾಮದ ಹಜರತ್ ಬಡೇಸಾಬ ಉರುಸ್ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಕಾಂಗ್ರೆಸ್ ಮುಖಂಡ ಕೆ.ಚಂದ್ರಶೇಖರ ನಾಯಕ ಇಡಪನೂರು ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಕ್ರಿಕೆಟ್ ಪಂದ್ಯಾವಳಿಗೆ ಬೇಕಾಗುವ ಸಾಮಗ್ರಿಗಳನ್ನು ಕೊಟ್ಟು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ 10,000 ರೂ. ಹಾಗೂ 5,000 ರೂ.ಗಳನ್ನು ಬಹುಮಾನವಾಗಿ ವೈಯಕ್ತಿಕವಾಗಿ ಕೊಡುವುದಾಗಿ ಹೇಳಿದರು. ನಂತರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರುಗಳಾದ ದೊಡ್ಡತಿಮ್ಮಯ್ಯ, ದೊಡ್ಡಭೀಮಯ್ಯ, ಕೆ. ಗೋರಪ್ಪ, ಗ್ರಾ.ಪಂ. ಉಪಾಧ್ಯಕ್ಷರಾದ ಬಜ್ಜಪ್ಪ, ಗ್ರಾ. ಪಂ. ಸದಸ್ಯರಾದ ಹನುಮಂತ ನಾಯಕ ದಳಪತಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಹನುಮಗೌಡ, ಸ್ವಾಮಿ ನಾಯಕ, ಭೀಮಣ್ಣ, ಮಹಾದೇವ, ಪ್ರಾಣೇಶರೆಡ್ಡಿ , ಜೆ. ರಾಮಪ್ಪ ನಾಯಕ, ಇಂಜನ್ನ, ರಾಮಾಂಜಿನೇಯ ನಾಯಕ, ಸಿದ್ಧು ನಾಯಕ ಮತ್ತಿತರರು ಉಪಸ್ಥಿತರಿದ್ದರು