Gas Price| ಹೊಸ ವರ್ಷದ ಶಾಕಿಂಗ್ ನ್ಯೂಸ್ : ಗ್ಯಾಸ್ ಸಿಲಿಂಡರ್ ಬೆಲೆ ರೂ.25 ಹೆಚ್ಚಳ!

ಕರ್ನಾಟಕ ನ್ಯೂಸ್24.ಕಾಂ
ಹೊಸ ವರ್ಷ 2023 ಮೊದಲ ದಿನ LPG ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ಯಾಸ್ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿವೆ. ಕಳೆದ ತಿಂಗಳಲ್ಲಿ ಹೆಚ್ಚಿಸಿದಂತೆ ಈ ಸಲವೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ.
ಈ ಬಾರಿ 19 ಕೆ.ಜಿ ವಾಣಿಜ್ಯ ಬಳಕೆ ಸಿಲಿಂಡರ್ ದರ ವನ್ನು ₹ 25 ರವರೆಗೆ ಹೆಚ್ಚಿಸಲಾಗಿದೆ. ಗೃಹ ಬಳಕೆ ಗ್ಯಾಸ್ ಸಿಲಿಂಡರ್ 14 ಕೆಜಿಯ ಬೆಲೆ ಮಾತ್ರ ಯಾವುದೇ ಹೆಚ್ಚಳ ಮಾಡಲಾಗಿಲ್ಲ.
ವಾಣಿಜ್ಯ LPG ಸಿಲಿಂಡರ್ ಬೆಲೆಗಳು:
ಜನವರಿ 1, 2023 ರಿಂದ ಕಮರ್ಷಿಯಲ್ ಸಿಲಿಂಡರ್ ಬೆಲೆಯನ್ನು OMC (ಆಯಿಲ್ ಮಾರ್ಕೆಟಿಂಗ್ ಕಂಪನಿ ) ಗಳು ರೂ. 25 ವರೆಗೆ ಹೆಚ್ಚಿಸಿವೆ.
ಬೆಲೆ ಹೆಚ್ಚಳದ ಹೊರೆ ರೆಸ್ಟೋರೆಂಟ್‌ಗಳು, ಹೋಟೆಲ್ ಗಳನ್ನು ನಿರ್ವಹಿಸುವ ಸಂಸ್ಥೆಗಳ ಮೇಲೆ ಬೀಳಲಿದೆ. ಸಹಜವಾಗಿ ಇದು ಹೋಟೆಲ್‌ಗಳಲ್ಲಿ ಆಹಾರಗಳ ಬೆಲೆಗಳ ಏರಿಕೆಗೆ ಕಾರಣವಾಗಲಿದೆ. ಅಂತಿಮವಾಗಿ ಬೆಲೆ ಹೆಚ್ಚಳದ ಬಿಸಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸಾಮಾನ್ಯರ ಮೇಲೆ ಬೀಳಲಿದೆ.
ಮಹಾನಗರಗಳಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ನ ತಾಜಾ ಬೆಲೆಗಳು ;
ದೆಹಲಿ – ₹ 1768
ಮುಂಬೈ – ₹ 1721
ಕೋಲ್ಕತಾ – ₹1870
ಚೆನ್ನೈ – ₹1917
ಹೈದರಾಬಾದ್ -1798
ಮೆಟ್ರೋಪಾಲಿಟನ್‌ಗಳಲ್ಲಿ ಗೃಹ ಬಳಕೆ LPG ಸಿಲಿಂಡರ್ ಬೆಲೆಗಳು:
ಮುಂಬೈ – ರೂ 1052.5
ಕೊಲ್ಕತಾ – ರೂ 1079
ಚೆನ್ನೈ – ರೂ 1068.5
ಹೈದರಾಬಾದ್ -1105
ಗ್ಯಾಸ್ ಕಂಪನಿಗಳು ಮನೆ ಬಳಕೆಯ ಸಿಲಿಂಡರ್ ದರ ಗಳನ್ನು ಕೊನೆಯ ಬಾರಿಗೆ ಜುಲೈ 6, 2022 ರಲ್ಲಿ ಹೆಚ್ಚಿಸಿದ್ದವು.
ಇದು ಒಟ್ಟು ರೂ.153.5 ಹೆಚ್ಚಾಗಿದೆ. ನಾಲ್ಕು ಬಾರಿ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಮೊದಲ ಮಾರ್ಚ್ 2022 ರಲ್ಲಿ ರೂ. 50 ಹೆಚ್ಚಿಸಲಾಗಿತ್ತು. ನಂತರ ಮತ್ತೆ ಮೇ ತಿಂಗಳಲ್ಲಿ ರೂ. 50 ಮತ್ತು ರೂ. 3.50 ಹೆಚ್ಚಿಸಿದ್ದವು. Oಅಂತಿಮವಾಗಿ ಕಳೆದ ವರ್ಷ ಜುಲೈನಲ್ಲಿ ಡೊಮೆಸ್ಟಿಕ್ ಸಿಲಿಂಡರ್ ಬೆಲೆ ರೂ.50 ಹೆಚ್ಚಿತ್ತು.