ಕೃಷಿ ಮೇಳ ಆರಂಭಕ್ಕೆ ಮುನ್ನ ಅಪಸ್ವರ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಜನವರಿ 10 ರಿಂದ 12ರ ನಡೆಸಲು ಉದ್ದೇಶಿಸಿರುವ ಕೃಷಿ ಮೇಳದ ಬಗ್ಗೆ ಅನ್ನದಾತರಿಂದ ಅಸಮಾಧಾನ ವ್ಯಕ್ತವಾಗಿದೆ.
ಮೇಳದ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ ಎನ್ನುವುದು ರೈತರ ಆರೋಪ. ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಹಾಗೂ ವಿಜಯನಗರ ಜಿಲ್ಲೆಗಳ ರೈತರಿಗೆ ಉಪಯೋಗವಾಗಲೆಂದು ಈ ಕೃಷಿ ಮೇಳ ಆಯೋಜಿಸಲಾಗಿದೆ.
ಆದರೆ ಸಮರ್ಪಕವಾಗಿ ಈ ಏಳು ಜಿಲ್ಲೆಗಳ ರೈತರಿಗೆ ಕೃಷಿ ಮೇಳದ ಬಗ್ಗೆ ಮಾಹಿತಿಯನ್ನು ಒದಗಿಸಿಲ್ಲ. ಕೃಷಿ ವಿಶ್ವವಿದ್ಯಾಲಯ ಮೇಳ ಆಯೋಜಿಸಿರುವ ಬಗ್ಗೆ ಪ್ರಚಾರ ಮಾಡಿಲ್ಲರಂದು ಬಹುತೇಕ ತಾಲೂಕಿನ ರೈತರಿಂದ ಅಸಮಧಾನ ವ್ಯಕ್ತವಾಗಿದೆ.
ಬಹುತೇಕ ರೈತರಿಗೆ ಕೃಷಿ ಮೇಳ ನಡಿಯುತ್ತಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ಹಳ್ಳಿಗಳಲ್ಲಿರುವ ರೈತರಿಗೆ ಮಾಹಿತಿ ತಲುಪಿಸುವಲ್ಲಿ ಕೃಷಿ ವಿಶ್ವವಿದ್ಯಾಲಯ ವಿಫಲವಾಗಿದೆ.
ಕೃಷಿ ಮೇಳದ ಆಯೋಜನೆಗೆ ಅದಾಜು ಹಣ ಎಷ್ಟು? ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಅಂದಾಜು ಎಷ್ಟು ಹಣ ಖರ್ಚು ಮಾಡುತ್ತಿದ್ದೀರಿ ಎನ್ನುವ ನಮ್ಮ ಪ್ರಶ್ನೆಗೆ ಕುಲಪತಿಗಳಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ.
ಕೇವಲ ಪತ್ರಿಕಾಗೋಷ್ಠಿ ಮಾಡಿ, ಮಾಹಿತಿ ತಲುಪಿಸುತ್ತೇವೆ ಎನ್ನುವಂತಹ ಹೇಳಿಕೆ ನೀಡಲಾಗಿದೆ. ಹಾಗಾದರೆ ಕೃಷಿ ಮೇಳದ ಪ್ರಚಾರಕ್ಕಾಗಿ ಹಣವನ್ನು ಇವರು ಮಾಡುವುದಿಲ್ಲವೇ? ಎನ್ನುವ ಪ್ರಶ್ನೆ ಕೇಳಿ ಬಂದಿದೆ.
ಪಚಾರ ಮಾಡದಿದ್ದರೆ, ರೈತರಿಗೆ ಮಾಹಿತಿ ಸಿಗದೆ ಇದ್ದರೆ, ಮೇಳ ಆಯೋಜಿಸಿದ ಲಾಭ ಏನು? ಕೂಡಲೇ ಈ ಬಗ್ಗೆ ಕೃಷಿ ವಿವಿ ಮೇಳದ ಬಗ್ಗೆ ಏಳು ಜಿಲ್ಲೆಗಳಲ್ಲಿ ಪ್ರಚಾರ ಮಾಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.