December 1, 2023

ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಗುಲ್ಬರ್ಗ ವಿಶ್ವವಿದ್ಯಾಲಯ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಪದೇ ಪದೆ ಪರೀಕ್ಷೆ ಮಂದೂಡಿ ವಿದ್ಯಾರ್ಥಿಗಳೊಂದಿಗೆ‌ ಚಲ್ಲಾಟವಾಡುತ್ತಿದ್ದ ಗುಲ್ಬರ್ಗ ವಿಶ್ವವಿದ್ಯಾಲಯ (Gulbarga University) ಈ ಸಲ ಫಲಿತಾಂಶ (Result) ವಿಳಂಬ ಮಾಡುವ ಮೂಲಕ  ಬಿಇಡಿ(B.Ed,) ಸ್ನಾತಕೋತ್ತರ (Post Graduation) ಕೋಸ್೯ ಮಾಡುವ ಕನಸು ಹೊಂದಿದ್ದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ.
ಉಜ್ವಲ ಭವಿಷ್ಯದ ಕನಸು ಹೊಂದಿದ್ದ ವಿದ್ಯಾರ್ಥಿಗಳ ಭವಿಷ್ಯಕ್ಕೆ ವಿಶ್ವವಿದ್ಯಾಲಯದ ವಿಳಂಬ ಧೋರಣೆ ಕಂಟಕ ತಂದೊಡ್ಡಿದೆ. ಸಾವಿರಾರು ವಿದ್ಯಾರ್ಥಿಗಳ ತಮ್ಮ ಕನಸಿನ ಕೋಸ್೯ ಕಲಿಕೆಯಿಂದ ಒಂದು ವರ್ಷ ದೂರ ಉಳಿಯುವಂತೆ ಮಾಡಿದೆ.
ಪ್ರತಿ ಶೈಕ್ಷಣಿಕ ವರ್ಷ ಏನಾದರೂ ಎಡವಟ್ಟು ಮಾಡುವ ಚಟ ವಿವಿ ಆಡಳಿತ ವರ್ಗ ರೂಢಿಸಿಕೊಂಡಿದೆ.
ರಾಯಚೂರು(Raichur) ಸೇರಿದಂತೆ ಗುಲ್ಬರ್ಗಾ ವಿವಿ ವ್ಯಾಪ್ತಿಯ ನೂರಾರು ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಪೂರ್ಣಗೊಂಡ ವಿದ್ಯಾರ್ಥಿಗಳು ಒಂದು ವರ್ಷ ಲಾಸ್ ಅಗಲಿದೆ.
ಸಮಯಕ್ಕೆ ಸರಿಯಾ ಫಲಿತಾಂಶ ಘೋಷಣೆ ಮಾಡದ ಗುಲ್ಬರ್ಗಾ ವಿಶ್ವವಿದ್ಯಾಲಯದ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣ. ರಾಯಚೂರಿನ ಡಯಟ್ (Diet) ಸೇರಿ ವಿವಿಧ ಸರ್ಕಾರಿ ಕಾಲೇಜಿಗಳಿಗೆ Government college) ಬಿಎಡ್ ಗಾಗಿ ಅರ್ಜಿಹಾಕಿದ್ದ ವಿದ್ಯಾರ್ಥಿ ಗಳಿಗಳು 6ನೇ ಸೆಮಿಸ್ಟರ್ (Semester) ಫಲಿತಾಂಶ ತಡವಾಗಿ ಬಂದಿದ್ದಕ್ಕೆ ಮೆರಿಟ್ ಲಿಸ್ಟ್ (Merit list)ನಲ್ಲಿ ಆಯ್ಕೆಯಾದ್ರೂ ದಾಖಲೆ ಪರಿಶೀಲನೆ ಸುತ್ತಿನಲ್ಲಿ ಸೀಟ್ ಕಳೆದುಕೊಂಡಿದ್ದಾರೆ.
ಜನವರಿ 11 ರವರೆಗೆ ದಾಖಲೆ ಪರಿಶೀಲನೆ (Document Verification) ಅವಕಾಶ ನೀಡಲಾಗಿತ್ತು. ಆದರೆ ಜನವರಿ 16ಕ್ಕೆ ಫಲಿತಾಂಶ ಹೊರಬಂದಿದ್ದರಿಂದ ವಿದ್ಯಾರ್ಥಿಗಳ ದಾಖಲೆ ಮರುಪರಿಶೀಲನೆ ಮಾಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡವಾಗಿ ಬಂದ 6ನೇ ಸೆಮಿಸ್ಟರ್ ಫಲಿತಾಂಶವನ್ನೂ ಪರಿಗಣಿಸಿ ಬಿಎಡ್ ಸಿಟ್ ಕೊಡುವಂತೆ ಒತ್ತಾಯಿಸಿದ್ದಾರೆ. ವಿವಿಯ ತಪ್ಪಿನಿಂದ ನಮಗೆ ಅನ್ಯಾಯವಾಗುತ್ತಿದೆ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Leave a Reply

Your email address will not be published.