November 28, 2023

ಮಸ್ಕಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ತಡೆವೊಡ್ಡಿದ ತಕರಾರು

ಕರ್ನಾಟಕನ್ಯೂಸ್24.ಕಾಂ
ರಾಯಚೂರು: ಅಗ್ನಿ ಅವಘಡದಿಂದ ಹೆಚ್ಚಿನ ನಷ್ಟ ತಪ್ಪಿಸಲು ನಿಗದಿತ ಅಂತರದಲ್ಲಿ ಅಗ್ನಿಶಾಮಕ ಠಾಣೆ ಇರಬೇಕು. ಆದರೆ‌ ಜಿಲ್ಲೆಯ ತಾಲೂಕುವೊಂದು 6 ವರ್ಷ ಕಳೆದರೂ ಅಗ್ನಿಶಾಮಕ ಠಾಣೆ ಸ್ಥಾಪನೆ‌ ಕಾಗದದಲ್ಲೆ ಉಳಿದಿದೆ.

READ|ಅತ್ತೆ ಮಗಳ ಕತ್ತು ಸೀಳಿದ ಆರೋಪಿ ಅಂದರ್!
ಇದು ಮಸ್ಕಿ ತಾಲೂಕು ಕೇಂದ್ರ‌‌ದ ದುಸ್ಥಿತಿ. ಮಸ್ಕಿ ತಾಲೂಕಿನಲ್ಲಿ ಎಲ್ಲೆ ಬೆಂಕಿ ಅವಘಡ ಸಂಭವಿಸಿದರೂ, ಬೆಂಕಿ ನಂದಿಸಲು ನೆರೆಯ ತಾಲೂಕುಗಳ ಮೊರೆ ಹೋಗಬೇಕು.‌ ಅದು ಕೂಡ 20-25 ಕಿ.ಮೀ ದೂರವಿರುವ ತಾಲೂಕು ಕೇಂದ್ರ ಗಳಿಂದ.
ಮಸ್ಕಿ ತಾಲೂಕು ಕೇಂದ್ರವಾಗಿ ಈಗಾಗಲೇ 6 ಕಳೆದಿವೆ. ಆದರೆ ತಾಲೂಕು ಕೇಂದ್ರದಲ್ಲಿ ಇರಬೇಕಾದ ಕಚೇರಿಗಳು ಮಾತ್ರ ಈ ವರೆಗೆ ಸ್ಥಾಪನೆಯಗಿಲ್ಲ. ವಿಶೇಷವಾಗಿ ಅಗ್ನಿಶಾಮಕ ಠಾಣೆ. ಠಾಣೆ ಸ್ಥಾಪನೆಗೆ ಈಗಾಗಲೇ ಭೂಮಿ ಮಂಜೂರಾಗಿದೆ. ಆದ್ರೂ ಈವರಗೆ ಅಗ್ನಿಶಾಮಕ ಠಾಣೆ ಬಂದಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗುತ್ತಿದೆ.
ತಕರಾರು-ತಡೆ
ನಾಲ್ಕು ವರ್ಷಗಳ ಹಿಂದೆ ಮಸ್ಕಿ ಪಟ್ಟಣದ ಲಿಂಗಸಗೂರು ರಸ್ತೆಯ ಬಳಿ ಸರಕಾರ 2.18 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು. ಆದರೆ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮಂಜೂರಾದ ಭೂಮಿಯ ಬಗ್ಗೆ ಸಾರ್ವಜನಿಕ ತಕಾರರು ಅರ್ಜಿ ಸಲ್ಲಿಕೆಯಾಗಿದೆ. ತಕರಾರು ಅರ್ಜಿ ಇತ್ಯರ್ಥವಾಗುವ ವರೆಗೆ ಅಗ್ನಿಶಾಮಕ ಠಾಣೆ ಸ್ಥಾಪನೆ‌ ಅಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.
ಸಾರ್ವಜನಿಕರ ಆರೋಪ
ನಾಲ್ಕು ವರ್ಷಗಳೇ ಗತಿಸಿದೆ ಆದರೆ ಅಗ್ನಿ ಶಾಮಕ ಠಾಣೆ ಮಂಜೂರು ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.
ಮಸ್ಕಿ ತಾಲೂಕು ಕೇಂದ್ರಕ್ಕೆ ಅಗತ್ಯವಿರುವ ಕಚೇರಿಗಳನ್ನು ಆರಂಭಿಸುವಂತೆ ಅನೇಕ ಸಲ ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೂ ಈವರಗೆ ಸರ್ಕಾರಿ ಕಚೇರಿಗಳನ್ನು ಮಂಜೂರು ಮಾಡುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಸರ್ಕಾರದ ಗಮನಕ್ಕೆ ತಂದು ಅಗ್ನಿ ಶಾಮಕ ಠಾಣೆ ಸೇರಿದಂತೆ ಎಲ್ಲಾ ಕಚೇರಿಗಳನ್ನು ಆರಂಭಿಸುವಂತೆ ಮತ್ತೊಮ್ಮೆ ಒತ್ತಾಯಿಸಲಾಗುವುದು ಅಂತ ಮಸ್ಕಿ ಶಾಸಕ ಆರ್‌. ಬಸನಗೌಡ ತುರ್ವಿಹಾಳ ತಿಳಿಸಿದ್ದಾರೆ.

Leave a Reply

Your email address will not be published.