RTPS ನ 4 ಘಟಕಗಳಲ್ಲಿ ಉತ್ಪಾದನೆ ಸ್ಥಗಿತ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: RTPSನ 5 ಮತ್ತು 6 ನೇ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಉತ್ಪಾದನೆ ಭಾನುವಾರ ದಿಢೀರ್ ಕುಸಿತವಾಗಿದೆ.
ಅರ್‌ಟಿಪಿಎಸ್ ನಲ್ಲಿ ಒಟ್ಟು 8 ವಿದ್ಯುತ್ ಘಟಕ(Unit)ಗಳಿವೆ. ವಾರ್ಷಿಕ ನಿರ್ವಹಣೆ, ಬಾಯ್ಲರ್ (bioler) ಟ್ಯೂಬ್ ಸೋರಿಕೆ ಹಾಗೂ ಹಾರುಬೂದಿ (Ash) ಹೊರ ಹಾಕುವ ಪೈಪ್ ಲೈನ್ ನಲ್ಲಿ ತಾಂತ್ರಿಕ ಸಮಸ್ಯೆ ಕಾರಣಕ್ಕೆ 1,4,5 ಮತ್ತು 6ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿವೆ.
ಹೀಗಾಗಿ 1,720 ಮೆಗಾವಾಟ್ ವಿದ್ಯು್ ಉತ್ಪಾದನಾ ಸಾಮರ್ಥ್ಯದ ಆರ್‌ಟಿಪಿಎಸ್ ಕೇವಲ 560 ಮೆಗಾವಾಟ್ (Mw)ವಿದ್ಯುತ್ ಮಾತ್ರ ಉತ್ಪಾದಿಸುತ್ತಿದೆ.
5 ನೇ ಘಟಕದ ದುರಸ್ತಿ ಕೈಗೊಳ್ಳಲಾಗಿದೆ. ಬಾಯ್ಲರ್ ಟ್ಯೂಬ್ ಸೋರಿಕೆಯಿಂದ 6ನೇ ಘಟಕ ಸ್ಥಗಿತವಾಗಿದ್ದು, ರಿಪೇರಿ ಕಾರ್ಯ ನಡೆಯುತ್ತಿದ್ದು ಒಂದೆರೆಡು ದಿನಗಳಲ್ಲಿ ಉತ್ಪಾದನೆ ಆರಂಭವಾಗಲಿದೆ ಎಂದು ಆರ್‌ಟಿಪಿಎಸ್ ಎಂದು ಅಧಿಕೃತ ಮೂಲಗಳು ತಿಳಿಸಿವೆ.