November 28, 2023

LIC AAO Requirement 2023| 300 ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳಿಗೆ ಅರ್ಜಿ

ಕರ್ನಾಟಕ ನ್ಯೂಸ್24.ಕಾಂ/JOB JUNCTION
ಜೀವ ವಿಮಾ ನಿಗಮ (LIC) ಸಹಾಯಕ ಆಡಳಿತ ಅಧಿಕಾರಿ (ಎಎಒ) ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 300 ಹುದ್ದೆಗಳಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್  www.licindia.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು .
ಕೊನೆಯ ದಿನಾಂಕ; ಅಭ್ಯರ್ಥಿಗಳು ಜನವರಿ 31 ರವರೆಗೆ ಅರ್ಜಿ ಸಲ್ಲಿಸಬಹುದು.
ಸಂಬಳ: 53,600 ರಿಂದ 1,02,090 ರೂ.
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು.
ವಯಸ್ಸಿನ ಮಿತಿ : LIC AAO ನೇಮಕಾತಿ 2023 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 21 ವರ್ಷದಿಂದ 30 ವರ್ಷ ವಯಸ್ಸಿನವರಾಗಿರಬೇಕು. SC 5, OBC 3, ವಿಕಲಚೇತನರಿಗೆ ತಲಾ 10 ವರ್ಷಗಳ ಸಡಿಲಿಕೆ. ಎಲ್ಐಸಿ ಉದ್ಯೋಗಿಗಳಿಗೂ ವಿನಾಯಿತಿ ನೀಡಲಾಗಿದೆ. ಅರ್ಹತೆ ಮತ್ತು ವಯಸ್ಸನ್ನು ಜನವರಿ 1, 2023 ರಂತೆ ಲೆಕ್ಕಹಾಕಲಾಗುತ್ತದೆ.
ಆಯ್ಕೆ ವಿಧಾನ
ಎರಡು ಹಂತದ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನವಿದೆ. ಪೂರ್ವಭಾವಿ ಪರೀಕ್ಷೆಯು ಫೆಬ್ರವರಿ 17 ಮತ್ತು 20 ರ ನಡುವೆ ನಡೆಯಲಿದೆ.
ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಇಂಗ್ಲಿಷ್‌ನಲ್ಲಿ ವಸ್ತುನಿಷ್ಠ ಪ್ರಶ್ನೆಗಳಿರುತ್ತವೆ. ಮಾರ್ಚ್ 18 ರಂದು ಮುಖ್ಯ ಪರೀಕ್ಷೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕ 700 ರೂ. ಪರಿಶಿಷ್ಟ ಜಾತಿ ಮತ್ತು ವಿಕಲಚೇತನರಿಗೆ ರೂ.85 ಇಂಟಿಮೇಷನ್ ಶುಲ್ಕ ಸಾಕಾಗುತ್ತದೆ.

Leave a Reply

Your email address will not be published.