December 3, 2023

ಭಾರತ-ನ್ಯೂಜಿಲೆಂಡ್ ನಡುವೆ 2ನೇ T-20 ಕ್ರಿಕೆಟ್ ಪಂದ್ಯ ಇಂದು

ಕರ್ನಾಟಕ ನ್ಯೂಸ್‌24.ಕಾಂ| Sports
ಭಾರತ (India) ಮತ್ತು ಪ್ರವಾಸಿ ನ್ಯೂಜಿಲೆಂಡ್ (new Zealand) ತಂಡಗಳ ನಡುವೆ ಲಖನೌ(Lucknow) ದಲ್ಲಿಂದು ಎರಡನೇ T-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ರಾಂಚಿಯಲ್ಲಿ ಮೊನ್ನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ 21 ರನ್‌ಗಳ ಜಯ ಸಾಧಿಸಿರುವ ನ್ಯೂಜಿಲೆಂಡ್, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಾಗಾಗಿ, ಸರಣಿ ಆಸೆ ಜೀವಂತವಾಗುಳಿಯಬೇಕಾದರೆ, ಇಂದಿನ ಪಂದ್ಯವನ್ನು ಹಾರ್ದಿಕ್ ಪಾಂಡ್ಯ (Hardik Panday) ನಾಯಕತ್ವದ ಟೀಂ ಇಂಡಿಯಾ ತಂಡ ಗೆದ್ದುಕೊಳ್ಳುವುದು ಅನಿವಾರ್ಯವಾಗಿದೆ. ಮತ್ತೊಂದೆಡೆ ಮಿಚೆಲ್ ಸ್ಯಾಂಟ್ನರ್ (Michael satner) ನೇತೃತ್ವದ ನ್ಯೂಜಿಲೆಂಡ್ ತಂಡ ಇಂದು ಎರಡನೇ ಪಂದ್ಯದಲ್ಲೂ ಜಯ ದಾಖಲಿಸುವ ಮೂಲಕ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಳ್ಳುವ ಯೋಚನೆ ಹೊಂದಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ಅನುಭವಿಸಿದ 0-3ರ ಕ್ಲೀನ್ ಸ್ವೀಪ್ ಸೋಲಿನ ಆಘಾತದಿಂದ ಹೊರಬರುವ ವಿಶ್ವಾಸದಲ್ಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟಿ-20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಫೆಬ್ರವರಿ 1 ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿದೆ.

Leave a Reply

Your email address will not be published.