ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಭೂಸ್ವಾಧೀನ: ಪರಿಹಾರ ಮೊತ್ತ ಘೋಷಣೆ

ಕರ್ನಾಟಕ ನ್ಯೂಸ್24.ಕಾಂ|State
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕ ರೂಪದ ದರ ನಿಗದಿಪಡಿಸಿ ಒಪ್ಪಂದದ ಐತೀರ್ಪು ರಚಿಸಿ ಪರಿಹಾರ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ಎಷ್ಟು ಪರಿಹಾರ?
ಒಪ್ಪಂದದ ಐತೀರ್ಪು ಅನ್ವಯ ಒಣ ಬೇಸಾಯಕ್ಕೆ ಪ್ರತಿ ಎಕರೆಗೆ 5 ಲಕ್ಷ ರೂಪಾಯಿ, ನೀರಾವರಿ ಜಮೀನಿಗೆ 6 ಲಕ್ಷ ರೂಪಾಯಿ, ಮಾರುಕಟ್ಟೆ ದರಕ್ಕೆ ನಿಯಮಾನುಸಾರ 4 ಪಟ್ಟು ದರವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಲಾಗಿದೆ ಎಂದರು.