ಶತಮಾನದ ಶಾಲೆ ಪುನಶ್ಚೇತನಕ್ಕೆ ಹಳೆಯ ವಿದ್ಯಾರ್ಥಿಗಳ ಶ್ರಮದಾನ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಅದು ಶತಮಾನ ಪೂರೈಸಿದ ಸರಕಾರಿ ಶಾಲೆ. ಅಳಿವಿನಂಚಿಗೆ ತಲುಪಿದ ಶಾಲೆಯ ಪುನಶ್ಚೇತನಕ್ಕೆ ಹಳೆಯ ವಿದ್ಯಾರ್ಥಿಗಳ ತಂಡ ಮುಂದಾಗಿದೆ.
ಅಕ್ಷರ ಕಲಿತ ಶಾಲೆಯನ್ನು ಅಂದಗೊಳಿಸಲು ಅಳಿಲು ಸೇವೆ ಮುಂದಾದವರು ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳು. ಸಾಮಾಜಿಕ ಜಾಲತಣಗಳ ಮೂಲಕ ಶಾಲೆಯಲ್ಲಿ ಓದಿದ ಹಖೆಯ ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನಕ್ಕೆ ಮುಂದಡಿಯಿಟ್ಟಿದ್ದಾರೆ.
UPI ಮೂಲಕ ದೇಣಿಗೆ ಸಂಗ್ರಹ
ಶಾಲೆಯ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿ ಎಂಬ ಸಂದೇಶ ಸಾರುವ ಶಾಲೆಯ ವಿಡಿಯೋ ಒಂದು ಹರಿದಾಡುತ್ತಿದೆ.
ವೀಡಿಯೋದಲ್ಲಿ ಯುಪಿಐ ಮೂಲಕ ಹಣ ಪಾವತಿಗೆ ಮನವಿ ಮಾಡಲಾಗಿದೆ. ಬಹುತೇಕರಿಂದ ಕೈಲಾದ ಪ್ರಮಾಣದ ಹಣ ಹರಿದು ಬಂದಿದೆ.
ಸಿಬ್ಬಂದಿಯ ಸಾಥ್
ಹಳೆಯ ವಿದ್ಯಾರ್ಥಿಗಳಿಗೆ ಶಾಲೆಯ ಸಿಬ್ಬಂದಿ ಕೈಜೋಡಿಸಿದ್ದಾರೆ. ಶಾಲಾ ಶಿಕ್ಷಕರು ತಲಾ ₹ 2000 ಧನ ಸಹಾಯ ಮಾಡಿದ್ದಾರೆ.
ಶ್ರಮದಾನ
ಹಳೆಯ ವಿದ್ಯಾರ್ಥಿಗಳ ತಂಡವೇ ಸ್ವತಃ ಶ್ರಮ ದಾನ ಮಾಡುವ ಮೂಲಕ ಶಾಲೆಯ ಸುಸ್ಥಿತಿಗೆ ತರಲಾಗುತ್ತಿದೆ.
ಶಿಥಿಲಗೊಂಡ ಕಟ್ಟಡದ ಗೋಡೆ, ಛಾವಣಿ, ಕಿಟಕಿ, ಬಾಗಿಲು, ನೆಲಹಾಸು ರಿಪೇರಿ ಮಾಡಲಾಗಿದೆ. ಬಹುತೇಕ ಕೆಲಸ ಪೂರ್ಣಗೊಂಡಿದ್ದು, ವಿದ್ಯುತ್ ವೈರಿಂಗ್ ಕೆಲಸ ಬಾಕಿ ಉಳಿದಿದೆ. ಸುಣ್ಣ-ಬಣ್ಣ ಬಳಿದು ಮೆರಗು ಮರುಕಳಿಸುವಂತೆ ಮಾಡಲಾಗುತ್ತಿದೆ.
ಸರಕಾರಿ ಶಾಲೆಗಳ ಉಳಿವಿಗೆ ಹಾಗೂ ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಮುಂದಾಗಿರುವ ತಂಡದ ನಿರ್ಧಾರ ಮೆಚ್ಚುಗೆ ಗಳಿಸಿದೆ.
ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರು ಹಾಗೂ
ಅಭಿಯಾನವನ್ನು ಬೆಂಬಲಿಸಿರುವವರು ತಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಸ್ಟೇಟಸ್ ಇಡುವ ಮೂಲಕ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟಿಗ್ರಾಂ ಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಅಭಿಯಾನಕ್ಕೆ ಬೆಂಬಲವಾಗಿ ನಿಂತಿದ್ದಾರೆ.
DYPC ಪ್ರೇರಣೆ
ವಿದ್ಯಾರ್ಥಿಗಳಿಗೆ ಈ ಕಾರ್ಯಕ್ಕೆ DYPC (ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ) ಆರ್.ಇಂದಿರಾ ಮಾರ್ಗದರ್ಶನ ಹಾಗೂ ಪ್ರೇರ ಶಕ್ತಿ ಎನ್ನುತ್ತಾರೆ ಹಳೆಯ ವಿದ್ಯಾರ್ಥಿಗಳು.