ಗುರುಗುಂಟ ಅಮರೇಶ್ವರ ಜಾತ್ರೆಯಲ್ಲೂ ಕೋಮು ಸಾಮರಸ್ಯ ಕದಡುವ ಧಳ್ಳುರಿ

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಹಿಂದೂ (Hindu) ದೇವಾಲಯ (Temple)ಗಳು ಮತ್ತು ದೇವಾಲಯಗಳ ಉತ್ಸವ, ಜಾತ್ರೆ(Fair)ಗಳಲ್ಲಿ ಹಿಂದೂಯೇತರರನ್ನು ನಿಷೇಧಿಸಬೇಕೆಂಬ ಬೇಡಿಕೆ ಕರ್ನಾಾಟಕ (Karnataka) ದಲ್ಲಿ ಮುಂದುವರೆದಿದೆ.
ರಾಜ್ಯದಲ್ಲಿ ವಿಶೇಷವಾಗಿ ಮಲೆನಾಡು ಹಾಗೂ ಕರಾವಳಿ (Canera)ಯಲ್ಲಿ ಭಾಗದಲ್ಲಿ ಕೇಳಿ ಬರುತ್ತಿದ್ದ ವಿರೋಧ ಇದೀಗ ಕಲ್ಯಾಣ ಕರ್ನಾಟಕ ಭಾಗದಲ್ಲೂ ಕೇಳಿ ಬರಲಾರಂಭಿಸಿದೆ.
ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳನ್ನು ನಿಷೇಧಿಸಬೇಕು ಎಂಬ ಕೂಗು ಹಿಂದುಪರ ಸಂಘಟನೆಗಳಿಂದ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಡಗುಂಟಿ ಅಮರೇಶ್ವರ (Gudugunti Amareshwara) ದೇವಸ್ಥಾನದಲ್ಲಿ ಮಾಚ್೯5 ರಂದು ನಡೆಯಲಿರುವ ಜಾತ್ರೆಯಲ್ಲಿ ಹಿಂದೂಯೇತರ ಮಾರಾಟಗಾರರಿಗೆ ಅವಕಾಶ ನೀಡದಂತೆ ಹಿಂದೂ ಜಾಗರಣ ವೇದಿಕೆ (Hindu Jagarn Vedike) ದನಿ ಎತ್ತಿದೆ.
ಕಲ್ಯಾಣ ಕರ್ನಾಟಕ (Kalayan Karnataka)
ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಅಮರೇಶ್ವರ ಜಾತ್ರೆ ಒಂದು. ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳ ಪಡುವ ದೇವಸ್ಥಾನ ಇದಾಗಿದೆ. ಈ ಜಾತ್ರೆ ವ್ಯಾಪಾರಿಗಳ ಪಾಲಿಗೆ ಸುಗ್ಗಿ ಎಂದೇ ಜನಜನಿತ.
ದೇವಸ್ಥಾನದ ಮೈದಾನದಲ್ಲಿ ಹಿಂದೂಯೇತರ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಬಾರದು.ಟೆಂಡರ್ ನ್ನು ಹಿಂದೂಗಳಿಗೆ ಮಾತ್ರ ನೀಡಬೇಕು ಎಂದು ಹಿಂದೂ ಜಾಗರಣ ವೇದಿಕೆ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದೆ.
ನೂರಾರು ಮುಸ್ಲಿಂ ಬಡ ಕುಟುಂಬಗಳು ಈ ಜಾತ್ರೆಯಲ್ಲಿ ಭಾಗವಹಿಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಒಂದು ವೇಳೆ ಧರ್ಮದ ಆಧಾರದ ಮೇಲೆ ನಿರ್ಬಂಧ ಹೇರಿದರೆ ಬಡ ಮುಸ್ಲಿಂ ವ್ಯಾಪಾರಿಗಳಿಗೆ ಇದು ಮಾರಕವಾಗಲಿದೆ ಎಂದು ಪ್ರಗತಿಪರ ಚಿಂತಕರು ಅಸಮಾಧಾನ ಹೊರಹಾಕಿದ್ದಾರೆ.
ಕರಾವಳಿಗೆ ಸೀಮಿತವಾಗಿದ್ದ ಧರ್ಮ ಧಳ್ಳುರಿ, ಕೋಮು ಸಂಘರ್ಷದ ವಿಚಾರಗಳು ಸಾಮರಸ್ಯ ನೆಲಕ್ಕೂ ಹರಡಲು ಆರಂಭಿಸಿದೆ ಎಂಬ ಭೀತಿ ಜಿಲ್ಲೆಯಲ್ಲಿ ಶುರುವಾಗಿದೆ.